


ಬಂಟ್ವಾಳ: ಪಾದಚಾರಿ ಮಹಿಳೆಯೋರ್ವಗಳಿಗೆ ಕಾರು ಡಿಕ್ಕಿಯಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆಳಕ್ಕೆ ಬಿದ್ದ ಘಟನೆ ಇಂದು ರಾತ್ರಿ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ನಡೆದಿದೆ .
ಗಾಯಳು ಮಹಿಳೆ ವೀರಕಂಭ ನಿವಾಸಿ ಐತ್ತಪ್ಪ ಗೌಡ ಅವರ ಪತ್ನಿ ಧರ್ಮಾವತಿ ಗೌಡ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭಿರ ಸ್ವರೂಪದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಾವತಿ ಗೌಡ ಅವರು ಬಿಸಿರೋಡಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದು, ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವ ವೇಳೆ ಅತೀ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿಹೊಡೆದು ಬಳಿಕ ಚಾಲಕನ ನಿಯಂತ್ರಣ ಕಳೆದು ರಸ್ತೆ ಯ ಬದಿಯಲ್ಲಿ ಆಳವಾದ ಗುಡಿಗೆ ಬಿದ್ದಿದೆ. ಘಟನೆಯಲ್ಲಿ ಪಾದಚಾರಿ ಮಹಿಳೆಗೆ ಗಂಭೀರ ಗಾಯಗಳಾಗಿದೆ, ಜೊತೆಗೆ ಕಾರು ಕೂಡಾ ನಜ್ಜುಗುಜ್ಜಾಗಿದೆ, ಆದರೆ ಕಾರು ಚಾಲಕ ಯಾವುದೇ ಪ್ರಾಣ ಅಪಾಯ ವಿಲ್ಲದೆ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಎಸ್. ಐ.ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ


