ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಸರಪಾಡಿ ಯುವಕ ಮಂಡಲವು ಆಯೋಜಿಸುತ್ತಿರುವ ೫ನೇ ವರ್ಷದ ನಗರ ಭಜನೆ ಮಹೋತ್ಸವವು ಶನಿವಾರ ರಾತ್ರಿ ದೇವಸ್ಥಾನದಿಂದ ಪ್ರಾರಂಭಗೊAಡಿತು.
ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಪ್ರಾರ್ಥನೆ ನೆರವೇರಿಸಿ, ಪ್ರತಿದಿನದ ಭಜನಾ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಿದರು. ಅರ್ಚಕ ಜಯರಾಮ ಕಾರಂತ, ಪುರೋಹಿತ ಅರುಣ ಐತಾಳ್ ಅವರು ಸಹಕರಿಸಿದರು. ಬಳಿಕ ಕ್ಷೇತ್ರದ ಅಗ್ರಹಾರ ಬೀದಿಯ ಮನೆಗಳಲ್ಲಿ ಭಜನಾ ಕಾರ್ಯ ನಡೆಸಲಾಯಿತು. ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪುರೋಹಿತ ದಯಾನಂದ ಐತಾಳ್ ಅರಮನೆ ಅವರ ಉಪಸ್ಥಿತಿಯಲ್ಲಿ ಭಜನೆ ನೆರವೇರಿಸಲಾಯಿತು.
ಕ್ಷೇತ್ರದ ಮೊಕ್ತೇಸರರಾದ ಉಮೇಶ್ ಆಳ್ವ ಕೊಟ್ಟುಂಜ, ಸುರೇಂದ್ರ ಪೈ ಎಸ್, ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಓಡದಡ್ಕ, ರಾಧಾಕೃಷ್ಣ ರೈ ಕೊಟ್ಟುಂಜ, ಎಸ್.ಪಿ.ಸರಪಾಡಿ, ಪ್ರಕಾಶ್ಚಂದ್ರ ಆಳ್ವ ಪಿ, ಸತೀಶ್ ಪೂಜಾರಿ ಬೊಳ್ಳೂರು, ಗಿರೀಶ್ ನಾಯ್ಕ್ ನೀರಪಲ್ಕೆ, ಆನಂದ ಶೆಟ್ಟಿ ಆರುಮುಡಿ, ದಯಾನಂದ ದರ್ಖಾಸು, ರಾಹುಲ್ ದರ್ಖಾಸು, ಯೋಗೀಶ್ ನೀರಪಲ್ಕೆ, ಚೇತನ್ ಬಜ, ಯೋಗೀಶ್ ಗೌಡ ನೀರೊಲ್ಬೆ, ಪ್ರದೀಪ್ ರೈ ಮಾವಿನಕಟ್ಟೆ, ಕಿಶನ್ ಎಸ್, ನಿತಿನ್ ಬಜ, ವಚನ್ ಬಜ, ವಿಜೇತ್ ಶೆಟ್ಟಿ ಹಾಲಾಡಿ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here