ಬಂಟ್ವಾಳ : ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ೮ ಸ್ಥಾನಗಳಿಗೆ ಜ. ೧೨ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ-ಸಹಕಾರ ಭಾರತಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಜತೆಗೆ ೫ ಸ್ಥಾನಗಳಿಗೆ ಬಿಜೆಪಿ-ಸಹಕಾರ ಭಾರತಿಯ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿದ್ದು, ಆ ಮೂಲಕ ಎಲ್ಲಾ ಸ್ಥಾನಗಳನ್ನೂ ಬಿಜೆಪಿ-ಸಹಕಾರ ಭಾರತಿ ಬಾಚಿಕೊಂಡAತಾಗಿದೆ.
ಚುನಾವಣೆಯಲ್ಲಿ ನಿರ್ದೇಶಕರಾಗಿ ಪದ್ಮನಾಭ ಬಿ, ಭವಾನಿಶಂಕರ ರಾವ್, ಕೆ.ಎನ್.ಶೇಖರ, ರಾಮಚಂದ್ರ ಗೌಡ ಮಣಿ, ಎಂ.ಮಹಾಬಲ ಶೆಟ್ಟಿ, ವಿಠಲ ಪೂಜಾರಿ ಪುಂಡಿಬೈಲು, ಎಂ.ಲಕ್ಷೀ÷್ಮ ವಿ. ಪ್ರಭು, ವಿದ್ಯಾವತಿ ಜಯಗಳಿಸಿದ್ದಾರೆ. ಪ್ರಕಾಶ್ ಕೆ., ಹರೀಶ್ ನಾಯ್ಕ, ಕರುಣೇಂದ್ರ ಪೂಜಾರಿ ಕೊಂಬ್ರಬೈಲು, ಮನೋಹರ ಮೂಲ್ಯ, ಬಸ್ತಿ ಸದಾಶಿವ ಶೆಣೈ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.