ವಿಟ್ಲ: ಸಿಬ್ಬಂದಿಗಳು ಪೊಲೀಸ್ ಕುಟುಂಬದ ಶ್ರೇಯೋಭಿವೃದ್ಧಿಯ ಜತೆಗೆ ಜನ ಸಮಾನ್ಯರು ಇಷ್ಟಪಡುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ವರ್ಗಾವಣೆ ಎಂಬುದು ಇಲಾಖೆಯಲ್ಲಿ ಸರ್ವೇ ಸಾಮಾನ್ಯದ್ದು, ಠಾಣೆಯಲ್ಲಿ ಕಳೆದ ದಿನಗಳು ಜೀವನದಲ್ಲಿ ಸದಾ ನೆನಪು ಇರುವಂತಿರಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರಗಳು ಬಹಳಷ್ಟು ಪ್ರಶಂಸನೀಯವಾಗಿದೆ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ ಹೇಳಿದರು.
ಅವರು ಬುಧವಾರ ವಿಟ್ಲ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ವರ್ಗಾವಣೆ ಹೊಂದಿದ ಪೊಲೀಸ್ ಸಿಬ್ಬಂದಿಗಳ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಟ್ಲ ಪೊಲೀಸ್ ಠಾಣೆಯ ಪ್ರೋಬೆಷನರಿ ಎಸ್. ಐ. ವಿನೋದ್ ರೆಡ್ಡಿ ಮಾತನಾಡಿ ವಿನೋದ್ ರೆಡ್ಡಿ ಮಾತನಾಡಿ, ಕೆಲಸ ಕಾರ್ಯಗಳಲ್ಲಿ ಪರಿಪೂರ್ಣತೆ ಇದ್ದಾಗ ಯಶಸ್ಸು ಲಭಿಸುತ್ತದೆ. ಕಾನೂನು ಪಾಲನೆಯೊಂದಿಗೆ ಎಲ್ಲರ ಜತೆಗೆ ಸಾಮರಸ್ಯದಿಂದ ಇದ್ದಾಗ ಠಾಣೆಯ ಹೆಸರು ಉತ್ತುಂಗಕ್ಕೇರುತ್ತದೆ. ಹಿರಿಯ ಅಧಿಕಾರಿಗಳ ಪ್ರೋತ್ಸಾಹ ಇದ್ದಾಗ ಸಿಬ್ಬಂದಿಗಳಿಗೆ ಉತ್ತಮ ಕಾರ್ಯ ನಡೆಸಲು ಸಾಧ್ಯ ಎಂದರು.
ವಿಟ್ಲ ಠಾಣೆಯಲ್ಲಿ ಸೇವೆ ಸಲ್ಲಿಸಿ ಬೇರೆ ಠಾಣೆಗಳಿಗೆ ವರ್ಗಾವಣೆ ಆಗಿರುವ ಇಬ್ರಾಹಿಂ, ಗಣೇಶ್, ದಿನೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಠಾಣೆಗೆ ಹೊಸದಾಗಿ ಆಗಮಿಸಿದ ಜಯರಾಮ ಕೆ. ಟಿ., ದಿನೇಶ್, ಶ್ರೀಧರ್ ಅವರನ್ನು ಸ್ವಾಗತಿಸಲಾಯಿತು.
ವಿಟ್ಲ ಪ್ರೋಬೆಷನರಿ ಎಸ್ ಐ ರಾಜೇಶ್, ಉಪ್ಪಿನಂಗಡಿ ಪ್ರೋಬೆಷನರಿ ಎಸ್ ಐ ಪವನ್, ವಿಟ್ಲ ಠಾಣೆಯ ಎ ಎಸ್ ಐಗಳಾದ ರಾಮಣ್ಣ ಗೌಡ, ರಘುರಾಮ, ರವೀಶ್ ಹಾಗೂ ವಿಟ್ಲ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಠಾಣಾ ಸಿಬ್ಬಂದಿ ಅನುಕುಮಾರ್ ಸ್ವಾಗತಿಸಿದರು. ವಿಶ್ವನಾಥ, ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಗೃಹ ರಕ್ಷ ದಳದ ಬಾಲಕೃಷ್ಣ ವಂದಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಮಕ್ಕಳ ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ಸ್ಪೂರ್ತಿ ಪ್ರಥಮ, ಗೀತಿಕಾ ದ್ವಿತೀಯ, ನಂಬರ್ ಗೇಮ್ ನಲ್ಲಿ ತೃಪ್ತಿ ಪ್ರಥಮ, ನವ್ಯ ದ್ವಿತೀಯ, ಪೊಲೀಸ್ ಕುಟುಂಬದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಮಹಿಳೆಯ ವಿಭಾಗದಲ್ಲಿ ಲಕ್ಷ್ಮೀ ಪ್ರಥಮ, ಗೀತಾ ದ್ವಿತೀಯ, ಷುರುಷರ ವಿಭಾಗದಲ್ಲಿ ಸಂತೋಷ್ ಪ್ರಥಮ, ಸತೀಶ್ ದ್ವಿತೀಯ, ಪತ್ನಿಯರನ್ನು ಅತೀ ಹೆಚ್ಚು ಸಮಯ ಎತ್ತಿಕೊಳ್ಳುವ ಸ್ಪರ್ಧೆಯಲ್ಲಿ ಮಂಜುನಾಥ – ಮಧು ಜೋಡಿ ಪ್ರಥಮ, ದಿನೇಶ್ – ಗೀತಾಶ್ರೀ ಜೋಡಿ ದ್ವಿತೀಯ ಸ್ಥಾನ ಗಳಿಸಿದರು.