ವಿಟ್ಲ: ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಹಾಗೂ ವಿಟ್ಲದ ಪರಿವಾರ ಸಂಘಟನೆಗಳ ವತಿಯಿಂದ ಕೃಷ್ಣೈಕ್ಯರಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದ ಪಂಚಲಿಂಗೇಶ್ವರ ಸದನದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ, ಗುರು ಸ್ಮರಣೆ ನಡೆಯಿತು.
ವೇಣೂರು ವಿಶ್ವಹಿಂದೂ ಹಿಂದೂ ಪರಿಷದ್ ಅಧ್ಯಕ್ಷ ಶಶಾಂಕ ಭಟ್, ನಿವೃತ್ತ ಪ್ರಿನ್ಸಿಪಾಲ್ ಅನಂತಕೃಷ್ಣ ಹೆಬ್ಬಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಪರ್ಕ ಪ್ತಮುಖ್ ವಿನೋದ್ ಅಡ್ಕಸ್ಥಳ ನುಡಿ ನಮನ ಅರ್ಪಿಸಿದರು. ವಿಹೆಚ್‌ಪಿ ವಿಟ್ಲ ಪ್ರಖಂಡ ಅಧ್ಯಕ್ಷರಾದ ಕೃಷ್ಣಪ್ಪ ಕಲ್ಲಡ್ಕ ಭಾಗವಹಿಸಿದ್ದರು.
ಪ್ರಮುಖರಾದ ಎಲ್.ಎನ್ ಕೂಡೂರು, ಜಗನ್ನಾಥ ಕಾಸರಗೋಡು, ರಾಮದಾಸ್ ಶೆಣೈ, ಅರುಣ್ ವಿಟ್ಲ, ಗೋವರ್ಧನ್, ಅಕ್ಷಯ್ ರಜಪೂತ್ ಕಲ್ಲಡ್ಕ, ಅನಂತ ಪ್ರಸಾದ್, ಜತ್ತಪ್ಪ ಟೈಲರ್, ರಾಧಾಕೃಷ್ಣ ನಾಯಕ್, ನಿತ್ಯಾನಂದ ಶೆಣೈ, ರಾಘವೇಂದ್ರ ಪೈ, ಕೃಷ್ಣಯ್ಯ.ಕೆ. ವಿಟ್ಲ ಅರಮನೆ ಉಪಸ್ಥಿತರಿದ್ದರು.
ವಿಹೆಚ್‌ಪಿ ವಿಟ್ಲ ಪ್ರಖಂಡದ ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಹೆಚ್‌ಪಿ ಪ್ರಖಂಡ ಸಹಮಿಲನ್ ಪ್ರಮುಖ್ ಧನಂಜಯ್ ಸೆರ್ಕಳ ವಂದಿಸಿದರು.