Wednesday, April 24, 2024

ವಿಟ್ಲ: ಪೌರತ್ವ ತಿದ್ದುಪಡಿ ಮಾಹಿತಿ ಶಿಬಿರ

ವಿಟ್ಲ: ವಿಟ್ಲ ಮುಸ್ಲಿಂ ಒಕ್ಕೂಟದ ಆಶ್ರಯದಲ್ಲಿ ವಿಟ್ಲ ಹೋಬಳಿಯ ಎಲ್ಲಾ ಮಸೀದಿಗಳ ಪದಾಧಿಕಾರಿಗಳು ಮತ್ತು ಖತೀಬರುಗಳಿಗೆ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಸಿಆರ್ ಬಗ್ಗೆ ಮಾಹಿತಿ ಮತ್ತು ತರಬೇತಿ ಶಿಬಿರ ಒಕ್ಕೆತ್ತೂರು ಮಸೀದಿ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನಪರ ಹೋರಾಟಗಾರ ಡಾ.ಕೃಷ್ಣಮೂರ್ತಿ ಮೈಸೂರು ಅವರು ಶಿಬಿರಾರ್ಥಿಗಳಿಗೆ ಕೇಂದ್ರ ಸರಕಾರದ ಕರಾಳ ಕಾನೂನಿನ ಅಪಾಯದ ಬಗ್ಗೆ ಮಾಹಿತಿ ನೀಡಿ, ಇದನ್ನು ಪ್ರತಿರೋಧಿಸುವ ಸಾಂವಿಧಾನಿಕ ಮಾರ್ಗಗಳ ಬಗ್ಗೆ ತರಬೇತಿ ನೀಡಿದರು. ಹೈಕೋರ್ಟ್ ನ್ಯಾಯವಾದಿ ಅಶ್ರಫ್ ಅಗ್ನಾಡಿ ಪೌರತ್ವ ತಿದ್ದುಪಡಿ ಕಾನೂನಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.
ಶಿಬಿರದ ನಂತರ ಮನೆ ಮನೆಗೆ ಸರಕಾರದ ಕಾನೂನಿಗೆ ಬೆಂಬಲ ಕೋರಿ ಬರುವವರಿಗಾಗಿ ’ನಾಳೆ ಬನ್ನಿ’ ಎಂಬ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ವಿ.ಎಚ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಒಕ್ಕೆತ್ತೂರು ಮಸೀದಿ ಅಧ್ಯಕ್ಷ ಹಮೀದ್ ಲಕ್ಸುರಿ, ಹನೀಫ್ ಖಾನ್ ಕೊಡಾಜೆ, ಖಲಂದರ್ ಪರ್ತಿಪ್ಪಾಡಿ, ಅಬೂಬಕರ್ ಅನಿಲಕಟ್ಟೆ, ಸಿರಾಜ್ ಚೆಂಡುಕಳ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ವಿ.ಕೆ.ಎಂ.ಅಶ್ರಫ್, ವಿ.ಕೆ.ಎಂ,ಹಂಝ, ಅಝೀಝ್ ಹಳೆಮನೆ, ಮಜೀದ್ ಕನ್ಯಾನ, ವಿ .ಎಸ್.ಇಬ್ರಾಹಿಂ, ಜಾಫರ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

 

More from the blog

ನೌಕಾಪಡೆಯ 2 ಹೆಲಿಕಾಪ್ಟರ್ ಪತನ; ಛಿದ್ರ, ಛಿದ್ರವಾದ ನೌಕಾಪಡೆಯ 10 ಮಂದಿ

ಕೌಲಾಲಂಪುರ: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾನೆಲೆಯಲ್ಲಿ ಹೆಲಿಕಾಪ್ಟರ್​ಗಳು ಪರೇಡ್‌ ನಡೆಸುತ್ತಿರುವಾಗ ಈ ಅವಘಡ ಸಂಭವಿಸಿದೆ. ಅತ್ಯಂತ ಸಮೀಪದಲ್ಲಿ ಹಾರಾಟ...

ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ...

ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ

ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೃತ ವಿದ್ಯಾರ್ಥಿನಿ ನೇಹಾ...

ಎ: 22: ವಿಟ್ಲದಲ್ಲಿ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್, ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಸ್ಥಳಾಂತರಗೊಂಡು ಶುಭಾರಂಭ

ವಿಟ್ಲ: ಕಳೆದ ಹಲವಾರು ವರುಷಗಳಿಂದ ವಿಟ್ಲ - ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್...