ವಿಟ್ಲ: ಸ್ನೇಹ ಮನೋಭಾವವನ್ನು ಇಟ್ಟುಕೊಂಡು ಸಹಕಾರಿ ನಡೆದಾಗ ಅರ್ಥಪೂರ್ಣ ಹಾಗೂ ಸುಭದ್ರವಾಗಿರುತ್ತದೆ. ನಿರಂತರ ಪರಿಶ್ರಮ ಇದ್ದಾಗ ಮಾತ್ರ ಅಭಿವೃದ್ದಿಯಾಗಲು ಸಾಧ್ಯ. ವೃತ್ತಿಪರರು, ಸಮುದಾಯದವರು ಸಂಘಟಿತರಾಗಿ ಅವರದೇ ಸೌಹಾರ್ದ ಸಹಕಾರಿಯ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಭಾನುವಾರ ವಿಟ್ಲ ಅರಮನೆ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿ ವಿಠಲ ಜಿ. ಎಸ್. ಬಿ. ಸೌಹಾರ್ದ ಸಹಕಾರಿ ನಿಯಮಿತದ ಉದ್ಘಾಟನಾ ಸಮಾರಂಭದಲ್ಲಿ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದರು.
ನಿಯಮಿತವನ್ನು ಉದ್ಘಾಟಿಸಿದ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತಾನಾಡಿ ದೇಶ ಸೂಪರ್ ಪವರ್ ಆಗಲು ಸಹಕಾರಿ ಸಂಘಗಳ ಪಾತ್ರ ಮಹತ್ತರವಾಗಿದೆ. ಸದಸ್ಯರ ವಿಶ್ವಾಸ ನಂಬಿಕೆಗಳಿಗೆ ಸಂಘ ಪೂರಕವಾಗಿ ಸ್ಪಂದಿಸಿದಾಗ ಕ್ಷಿಪ್ರ ಬೆಳವಣಿಗೆಯನ್ನು ಕಾಣಬಹುದು. ವಿಟ್ಲದ ಬೆಳವಣಿಗೆಯಲ್ಲಿ ಜಿಎಸ್‌ಬಿ ಸಮಾಜದ ಕೊಡುಗೆ ಬಹಳಷ್ಟು ಇದ್ದು, ವಿಟ್ಲ ಸಾರ್ವಜನಿಕ ಕ್ಷೇತ್ರದ ತೊಟ್ಟಿಲು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ. ರಾಧಾಕೃಷ್ಣ ಪೈ ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವಿಟ್ಲ ಜಿಎಸ್‌ಬಿ ಸಮಾಜ ಬಂಧುಗಳ ಸಹಕಾರವಿದೆ. ಜಿಎಸ್‌ಬಿ ಸಹಕಾರಿಯ ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.
ಮಂಗಳೂರು ಲೆಕ್ಕಪರಿಶೋಧಕ ಜಗನ್ನಾಥ್ ಕಾಮತ್ ತಂತ್ರಾಂಶ ಅನಾವರಣಗೊಳಿಸಿದರು. ನಿವೇದಿತ ಗೋಕುಲನಾಥ್ ಪ್ರಭು ಠೇವಣಿ ಪತ್ರಗಳ ಹಸ್ತಾಂತರ ಮಾಡಿದರು.
ವಿಟ್ಲದ ಹಿರಿಯ ಉದ್ಯಮಿ ವೆಂಕಟೇಶ್ ಭಟ್, ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಎಂ. ರಾಧಾಕೃಷ್ಣ ನಾಯಕ್, ಎಂ. ಹರೀಶ್ ನಾಯಕ್, ಎನ್. ನವನೀತ ಭಟ್, ಎಂ. ನಿತ್ಯಾನಂದ ನಾಯಕ್, ಶ್ರೀಧರ ಪೈ, ಕೆ. ಕೃಷ್ಣ ಪ್ರಸಾದ್, ಕೆ. ಮುರಳೀಧರ ಭಟ್, ಕೆ. ಪ್ರೀತಾ ಭಟ್, ವೀಣಾ ವಿ. ಪೈ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಟ್ಲ ವಿ.ಎಸ್.ಎಸ್. ಸಂಘದ ನೂತನ ಸದಸ್ಯರಾದ ರಾಘವೇಂದ್ರ ಪೈ ಅವರನ್ನು ಗುರುತಿಸಲಾಯಿತು. ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಎಲ್. ಎನ್. ಕೂಡೂರು, ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಶುಭಾಶಂಸನೆಗೈದರು.
ಸುಮನಾ ನಾಯಕ್ ಪ್ರಾರ್ಥಿಸಿದರು. ನಿರ್ದೇಶಕ ಪಿ. ಸುಬ್ರಾಯ ಪೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಎಂ. ಸುಭಾಶ್ಚಂದ್ರ ನಾಯಕ್ ವಂದಿಸಿದರು. ನಿರ್ದೇಶಕ ವಿ. ರಾಮದಾಸ ಶೆಣೈ ಕಾರ್ಯಕ್ರಮ ನಿರೂಪಿಸಿದರು.

 

,,,,,,,,

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here