Friday, April 26, 2024

ಕಮಲತನಯನ ಷಟ್ಪದಿ ಪುಸ್ತಕ ಬಿಡುಗಡೆ

ವಿಟ್ಲ: ಶಿಕ್ಷಕ, ಸಾಹಿತಿ ನಾಗರಾಜ ಖಾರ್ವಿ ಕಂಚುಗೋಡು ಅವರು ಬರೆದ, ಬೆಂಗಳೂರಿನ ಹೆಚ್.ಎಸ್.ಆರ್.ಎ. ಪ್ರಕಾಶನ ಪ್ರಕಟಿಸಿರುವ, ಕಮಲತನಯನ ಷಟ್ಪದಿ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕ ಡಾ.ಮಹಾಬಲೇಶ್ವರ ರಾವ್, ಛಂದೋಬದ್ಧವಾಗಿ ಬರೆಯುವವರೆ ವಿರಳರಾದ ಈ ಕಾಲಘಟ್ಟದಲ್ಲಿ, ನೀತಿ ಬೋಧೆಯಂತಿರುವ ಸುಮಾರು 250 ಕುಸುಮ ಷಟ್ಪದಿಯ ಪದ್ಯಗಳನ್ನು ಒಳಗೊಂಡ ಪುಸ್ತಕವನ್ನು ನಾಗರಾಜ ಖಾರ್ವಿ ಬರೆದಿದ್ದಾರೆ. ಈ ಕಾಲಕ್ಕೆ ಇದೊಂದು ಸಾಧನೆಯೇ ಆಗಿದೆ ಎಂದರು.
ಬೈಂದೂರಿನ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್‍ರವರು ಪುಸ್ತಕದ ಪರಿಚಯ ಮಾಡಿದರು. ಶಿಕ್ಷಕ, ಯಕ್ಷಗಾನ ಪ್ರಸಂಗಕರ್ತ ಹೆಬ್ರಿ ತಾಲೂಕು ಕ.ಸ.ಪ. ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮರವರು ಆಯ್ದ ಕುಸುಮ ಷಟ್ಪದಿಯ ಪದ್ಯಗಳನ್ನು ಗಮಕ ಮತ್ತು ಯಕ್ಷಗಾನ ಶೈಲಿಯಲ್ಲಿ ಹಾಡಿದರು. ಅನ್ನಪೂರ್ಣ ಬಿ.ಎಂ. ಕವಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಅಶ್ವಿನಿ ಶಾಸ್ತ್ರಿ ಸ್ವಾಗತಿಸಿದರು. ನಾಗರಾಜ ಖಾರ್ವಿ ವಂದಿಸಿದರು. ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

More from the blog

ಹಕ್ಕಿಜ್ವರ ಭೀತಿ : ದ.ಕ ಗಡಿ ಭಾಗಗಳಲ್ಲಿ ತಪಾಸಣೆ

ಮಂಗಳೂರು: ಕೇರಳದ ಆಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ವಾಹನಗಳ ತಪಾಸಣೆ ಆರಂಭಗೊಂಡಿದೆ. ಗಡಿ ಭಾಗವಾದ...

ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸುಮಾರು 2,88,19,342 ಮತದಾರರು...

ಅಡಿಕೆ ಹಾಗೂ ಹಿಂಗಾರ ಕಳ್ಳತನ : ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕೆಲಸಗಾರರು

ಕಿನ್ನಿಗೋಳಿ: ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತೋಟದ ಕೆಲಸಗಾರರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಅಡಿಕೆ ಕಳ್ಳನನ್ನು ಅಂಗಾರ ಗುಡ್ಡೆ ನಿವಾಸಿ ವಿಜಯ ಎಂದು ಗುರುತಿಸಲಾಗಿದೆ. ಇಲ್ಲಿನ ಕೆಂಚನಕೆರೆಯ ಉದ್ಯಮಿ...

ಅಡಿಕೆ ದರ ಏರಿಕೆ : ಚುನಾವಣೆ ಬಳಿಕ ಮತ್ತಷ್ಟು ಏರಿಕೆ..?

ಪುತ್ತೂರು:ಲೋಕಸಭಾ ಚುನಾವಣೆ ಮುಗಿದ ಬಳಿಕ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಾಣುವ ಸಾಧ್ಯತೆಯನ್ನು ಮಾರುಕಟ್ಟೆ ಮೂಲಗಳು ವ್ಯಕ್ತಪಡಿಸಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಚುನಾವಣೆ ದಿನಾಂಕ ಘೋಷಣೆಯ ಮೊದಲು ಅಂದರೆ ಫೆಬ್ರವರಿಯಲ್ಲಿ...