ವಿಟ್ಲ:ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ವಾರ್ಷಿಕ ಜಾತ್ರೋತ್ಸವದಲ್ಲಿ ಸೋಮವಾರ ಶ್ರೀ ದೇವರ ದರ್ಶನ ಬಲಿ ಉತ್ಸವ ನಡೆಯಿತು. ವಾರ್ಷಿಕ ಜಾತ್ರೋತ್ಸವದಲ್ಲಿ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಂಬಳೆ ನಾಟ್ಯ ವಿದ್ಯಾ ನಿಲಯದ ವಿದುಷಿ ವಿದ್ಯಾಲಕ್ಷ್ಮೀ ಇವರ ಶಿಷ್ಯೆಯರಿಂದ ನೃತ್ಯ ಸಂಭ್ರಮ ನಡೆಯಿತು.
ವಿಟ್ಲೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ತುಳು ರಂಗಭೂಮಿ ಕಲಾವಿದರಾದ ಸುರೇಶ್ ಕೂಡೂರು ಮತ್ತು ಯದು ವಿಟ್ಲ ಅವರನ್ನು ಸನ್ಮಾನಿಸಲಾಯಿತು. ರಂಗ ನಟರಾದ ದೇವದಾಸ್ ಕಾಪಿಕಾಡ್, ವಿಆರ್‍ಸಿ ನಿರ್ದೇಶಕ ರಮಾನಾಥ ವಿಟ್ಲ, ಆರ್.ಕೆ ಆಟ್ರ್ಸ್‍ನ ರಾಜೇಶ್ ವಿಟ್ಲ, ಕೃಷ್ಣಯ್ಯ ಇದ್ದರು.