ವಿಟ್ಲ: ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಸೋಮವಾರ ರಾತ್ರಿ ದೇಗುಲದಲ್ಲಿ ನಾನಾ ವೈದಿಕ ಕಾರ್ಯಕ್ರಮಗಳ ಬಳಿಕ ರಾತ್ರಿ ಹೂತೇರು ಉತ್ಸವ ನಡೆಯಲಿದೆ. ಆ ಬಳಿಕ ದೇಗುಲ ಮುಂಭಾಗದ ರಥದ ಗದ್ದೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಟ್ಲ ವಿಆರ್‌ಸಿ ಸಾರಥ್ಯದಲ್ಲಿ ಸಂಗೀತ, ಗಾಯನ, ಶಾಸ್ತ್ರೀಯ ನೃತ್ಯ, ಅಭಿನಯಗಳನ್ನೊಳಗೊಂಡ ಆಕರ್ಷಕ ’ವಿಟ್ಲೋತ್ಸವ’ ಪ್ರದರ್ಶನಗೊಳ್ಳಲಿದೆ. ಸನ್ಮಾನ ಕಾರ್ಯಕ್ರಮದಲ್ಲಿ ತುಳು ರಂಗಭೂಮಿ ಕಲಾವಿದರಾದ ಸುರೇಶ್ ಕೂಡೂರು ಮತ್ತು ಯದು ವಿಟ್ಲ ಅವರಿಗೆ ಸನ್ಮಾನ ನಡೆಯಲಿದೆ.