ವಿಟ್ಲ: ವಿಟ್ಲ ಮಹತೋಭಾರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿ, ವಿಟ್ಲ ವಲಯ ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ವತಿಯಿಂದ ವಿ ಟಿವಿ ಸಾರಥ್ಯದಲ್ಲಿ ಶಿವಂ ಇವೆಂಟ್ಸ್ ಅವರಿಂದ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ರಥಗದ್ದೆಯಲ್ಲಿ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಉದ್ಘಾಟಿಸಿದರು. ಉದ್ಯಮಿ ಶ್ರೀಧರ್ ಶೆಟ್ಟಿ ಗುಬ್ಯ ಅವರು ವಿ ಟಿವಿ ಯುಟ್ಯೂಬ್ ಚಾನೆಲ್ ಲೋಕಾರ್ಪಣೆಗೊಳಿಸಿದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಅವರು ಮಾತನಾಡಿ ಇಂದು ಸಾಮಾಜಿಕ ಜಾಲತಾಣದಿಂದಾಗಿ ಸುದ್ದಿಗಳು ಜನರಿಗೆ ಅತೀ ವೇಗವಾಗಿ ದೊರೆಯುತ್ತಿದೆ. ಉತ್ತಮ ಸುದ್ದಿಗಳನ್ನು ಜನರಿಗೆ ತಲುಪಿಸಿದಾಗ ಮಾಧ್ಯಮಗಳು ಬೆಳೆಯುತ್ತದೆ ಎಂದರು.
ಪತ್ರಕರ್ತ ಭರತ್ ರಾಜ್ ಸನಿಲ್, ಉದ್ಯಮಿ ರಾಜಾರಾಂ ಶೆಟ್ಟಿ ಕೋಲ್ಪೆಗುತ್ತು, ತುಳುವಸಿರಿ ಖ್ಯಾತಿಯ ಅದ್ವಿಕಾ ಶೆಟ್ಟಿ ಶುಭ ಹಾರೈಸಿದರು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಡ್ಯಾನ್ಸರ್ ಸುನೀಲ್ ಶೆಟ್ಟಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ನೃತ್ಯ ಸಂಗೀತಗಳ ವಿಶೇಷ ಶೈಲಿಯ ಕಾರ್ಯಕ್ರಮ ನಡೆಯಿತು. ಆರ್ಯಭಟ ಪ್ರಶಸ್ತಿ ಪುರಸ್ಕøತ ಜಗದೀಶ್ ಆಚಾರ್ಯ ಪುತ್ತೂರು ನೇತೃತ್ವದಲ್ಲಿ ಸಂಗೀತ ರಜಮಂಜರಿ ನಡೆಯಿತು. ಖ್ಯಾತ ಗಾಯಕರಾದ ಕಿರಣ್ ಕಾಸರಗೋಡು, ಪೊಲ್ಲಚ್ಚಿ ಮುತ್ತು, ರಾಕೇಶ್ ದಿಲ್ಸೇ, ವಿಜಯಶ್ರೀ ಮುಳಿಯ, ನತಾಶ ಕಣ್ಣೂರು, ವಿದ್ಯಾ ಸುವರ್ಣ, ದೀಪ್ತಿ ರಾಕೇಶ್, ಸಮನ್ವಿ ರೈ ಅವರು ನಾನಾ ಚಲನಚಿತ್ರಗಳ ಹಾಡು ಹಾಡಿ ಮನರಂಜಿಸಿದರು.
ಉದ್ಯಮಿ ಸದಾಶಿವ ಆಚಾರ್ಯ, ದ.ಕ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಪ್ರಭಾಕರ ಆಚಾರ್ಯ, ವಿ ಟಿವಿಯ ನಿರ್ದೇಶಕ ರಾಮ್‍ದಾಸ್ ಶೆಟ್ಟಿ, ಪದ್ಮನಾಭ ಕಟ್ಟೆ, ಧ್ವನಿ ಬೆಳಕು ಸಂಯೋಜಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ, ವಲಯಾಧ್ಯಕ್ಷ ಪ್ರಶಾಂತ್ ಕುಂಡಡ್ಕ, ಶಿವಂ ಡ್ಯಾನ್ಸ್ ಅಕಾಡೆಮಿಯ ಸುದೀರ್ ನಾಯ್ಕ, ಮಹೇಶ್ ಶೆಟ್ಟಿ ನೆಟ್ಲ, ಪ್ರಶಾಂತ್ ನೀರ್ಕಜೆ, ಲೋಕೇಶ್ ಭಾಗವಹಿಸಿದ್ದರು. ನಿರೂಪಕಿ ನಮಿತ ಶೆಟ್ಟಿ ಹಾಗೂ ಆರ್.ಜೆ ಪ್ರಸನ್ನ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here