ವಿಟ್ಲ: ಕೇಂದ್ರ ಸರಕಾರ ಜಾರಿಗೆ ತಂದಿರುವ ಅಸಂವಿಧಾನಿಕ ಕಾಯ್ದೆಗಳಾದ ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ವಿರುದ್ಧ ಪೆರುವಾಯಿ ಸಿರಾಜುಲ್ ಹುದಾ ಸೆಕೆಂಡರಿ ಮದ್ರಸ, ಮುಚ್ಚಿರಪದವು ಹಯಾತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಮತ್ತು ಮದ್ರಸತುನ್ನೂರು ಓಣಿಬಾಗಿಲು ಇಲ್ಲಿನ ವಿದ್ಯಾರ್ಥಿಗಳಿಂದ ಪೆರುವಾಯಿ ಮದ್ರಸದ ವಠಾರದಲ್ಲಿ ಪ್ರತಿಭಟನೆ ನಡೆಯಿತು.
ಮದ್ರಸ ಅಧ್ಯಾಪಕರ ಒಕ್ಕೂಟ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. (ಈಸ್ಟ್) ಜಿಲ್ಲೆ ನಿರ್ದೇಶನದಂತೆ ಮಹ್’ಳರತುಲ್ ಬದ್ರಿಯ್ಯ ಮಜ್ಲಿಸ್, ಖಂಡನಾ ಭಾಷಣ, ಪ್ರತಿಜ್ಞೆ ಬೋಧನೆ, ಭಿತ್ತಿಪತ್ರ ಪ್ರದರ್ಶನ, ಚಿಲ್ಡ್ರನ್ಸ್ ಚೈನ್, ಐಕ್ಯತೆ ಘೋಷಣೆ, ಭಾರತದ ಭೂಪಟ ರೂಪದಲ್ಲಿ ವಿದ್ಯಾರ್ಥಿ ದೇಶ ಪ್ರೇಮ ಅನಾವರಣ ಹಾಗೂ ಸಂವಿಧಾನ ಮತ್ತು ಪೌರತ್ವ ವಿಷಯದಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಖತೀಬ್ ಮುಹಮ್ಮದ್ ಶರೀಫ್ ಮದನಿ, ಮುಖ್ಯ ಅಧ್ಯಾಪಕರಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ, ಅಧ್ಯಾಪಕರಾದ ಮುಹಮ್ಮದ್ ಹಾರಿಸ್ ಹಿಮಮಿ, ಶರೀಫ್, ಜಮಾಅತ್ ಸಮಿತಿ ಉಪಾಧ್ಯಕ್ಷ ಅಬೂಬಕರ್ ಸುನ್ನೀ ಫೈಝಿ, ಇಸ್ಮಾಯಿಲ್ ಕಾನ, ಅಬ್ದುಲ್ಲಾ ಕಾನ, ಮುಚ್ಚಿರದವು ಮದ್ರಸ ಸಮಿತಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಸ್ಮಾಯಿಲ್ ಶಾಫಿ, ಮುಹಮ್ಮದ್ ಶರೀಫ್ ಹಾಜಿ, ಅಬ್ಬಾಸ್ ಹಾಜಿ ಹಾಗೂ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.