ವಿಟ್ಲ : ವಿಟ್ಲ ಮೇಗಿನಪೇಟೆ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾಸ್ಕ್ ವಿಟ್ಲ ಇದರ ವತಿಯಿಂದ 58 ಕೆ.ಜಿ.ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ರಾಮದಾಸ್ ಶೆಣೈ ಮಾತನಾಡಿ ಕಬಡ್ಡಿಯು ಭಾರತೀಯ ನೆಲದ ಕ್ರೀಡೆಯಾಗಿದ್ದು, ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕಬಡ್ಡಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವಂತಹ ಎಲ್ಲಾ ರ್ಹತೆಯಿದೆ ಎಂದರು.
ಅಲ್ಪಸಂಖ್ಯಾತ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಸಫ್ವಾನ್ ಮಾತನಾಡಿ ಕ್ರೀಡಾಕೂಟಗಳು ದೈಹಿಕ ಸಮತೋಲನವನ್ನು ಕಾಪಾಡುವುದರ ಜೊತೆಗೆ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು.
ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಮೇಗಿನಪೇಟೆ ಎಸ್‍ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್, ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರಾದ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಜೆಡಿಎಸ್ ಮುಖಂಡ ಹಮೀದ್ ಕಂಬಳಬೆಟ್ಟು, ಡಿ.ವೈ.ಎಫ್.ಐ ವಿಟ್ಲ ವಲಯಾದ್ಯಕ್ಷ ಶೌಕತ್ ಅಲಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕ ಹನೀಫ್ ಬಗ್ಗುಮೂಲೆ, ಉದ್ಯಮಿಗಳಾದ ಇಕ್ಬಾಲ್ ಹಳೇಮನೆ, ಇಕ್ಬಾಲ್ ಶೀತಲ್, ಹನೀಫ್ ಹಳೆಮನೆ, ಮಹೇಶ್ ವಿಟ್ಲ, ರಫೀಕ್ ಪೆÇನ್ನೋಟ್ಟು, ರವಿಕುಮಾರ್ ಚಂದಳಿಕೆ, ವಿ.ಹೆಚ್ ನಿಸಾರ್, ವಿ.ಕೆ.ಎಂ. ಹಂಝ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಾಸ್ಕ್ ವಿಟ್ಲ ಪದಾಧಿಕಾರಿಗಳಾದ ರಝಾಕ್, ಖಲಂದರ್, ತವಾಝ್, ಇಮ್ರಾನ್, ಶಫೀಕ್, ಹನೀಫ್ ಮೇಗಿನಪೇಟೆ ಮೊದಲಾದವರು ಉಪಸ್ಥಿತರಿದ್ದರು.
ವಾಸ್ಕ್ ವಿಟ್ಲ ಅಧ್ಯಕ್ಷ ಶಮೀರ್ ಚಿಮ್ಮಿ ಸ್ವಾಗತಿಸಿದರು. ಸಮದ್ ಬದ್ರಿಯ ವಂದಿಸಿದರು. ಪತ್ರಕರ್ತ ಲತೀಫ್ ಕಾರ್ಯಕ್ರಮ ನೇರಳಕಟ್ಟೆ ನಿರೂಪಿಸಿದರು.
ಈ ಕಬಡ್ಡಿ ಪಂದ್ಯಾಟದಲ್ಲಿ 38 ತಂಡಗಳು ಭಾಗವಹಿಸಿದ್ದವು. ಡಿ ಗ್ರೂಪ್ ವಿಟ್ಲ ತಂಡವು ಪ್ರಥಮ, ವಾಸ್ಕ್ ವಿಟ್ಲ ತಂಡವು ದ್ವಿತೀಯ, ಓಂ ಶಕ್ತಿ ಬಳಗ ತೃತೀಯ ಹಾಗೂ ಫ್ರೆಂಡ್ಸ್ ಮೇಗಿನಪೇಟೆ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here