ವಿಟ್ಲ: ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರ ಇದರ ಸಹಯೋಗದಲ್ಲಿ ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸಂಗೀತ ತರಬೇತಿ ತರಗತಿಯನ್ನು ಸಂಗೀತ ವಿದುಷಿ ರಶ್ಮಿ ಶೈಂತಿಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀದೇವಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಗಂಗಮ್ಮ ಅವರು ಮಾತನಾಡಿ ಸಂಗೀತ ಒಲಿದರೆ ನಮ್ಮ ಜೀವನದ ಅಮೂಲ್ಯ ಒಂದು ಸಂಪತ್ತಾಗಬಹುದು. ಇದು ಆತ್ಮಾನಂದದೊಡನೆ ಇತರಿಗೂ ಹಿತವನ್ನು ನೀಡುವ ಗಾನಕ್ಕೆ ಒಲಿಯದ ದೇವರಿಲ್ಲ, ಸಂಗೀತ ಸಾಧನೆ ಮಾಡಿದರೆ ಸಾವಿರಾರು ಜನ ಸೇರಿದ ಸಭೆಯಲ್ಲಿ ಗುರುತಿಸಲ್ಪಡುವಂತಾಗುತ್ತದೆ. ನಿರಂತರ ಸಾಧನೆ ಮಾಡಿದರೆ ಮಾತ್ರ ಸಂಗೀತ ಶಾರದೆಯನ್ನು ಒಲಿಯಲು ಸಾಧ್ಯ ಎಂದರು.
ದಿವ್ಯಾ, ನಮಿತಾಶ್ರೀಯ ಪ್ರಾರ್ಥನೆ ಹಾಡಿದರು. ಕೃಪಾ ಸ್ವಾಗತಿಸಿದರು. ವಿನಯ ವಂದಿಸಿದರು, ಶ್ವೇತಾ ನಿರೂಪಿಸಿದರು. ಪವಿತ್ರಾ, ನಿರ್ಮಲ ಸಹಕರಿಸಿದರು. ಭರತನಾಟ್ಯ ಶಿಕ್ಷಕಿ ಕಾವ್ಯ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಜಯಕೃಷ್ಣ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here