ವಿಟ್ಲ: ಸಮಯಪ್ರಜ್ಞೆ ಇಲ್ಲದವರ ಜೀವನವೇ ಶೂನ್ಯವಾಗುತ್ತದೆ. ಸಮಾಜ ಬಾಂಧವರು ವಿಘಟನೆಗಳಿಂದ ದೂರವಾಗಿ ಸಂಘಟನೆಗೆ ಪುಷ್ಟಿ ನೀಡಬೇಕು. ಪರಿವರ್ತನೆಯಾಗಬೇಕು. ತಿಥಿ, ಗೃಹಪ್ರವೇಶ ಇನ್ನಿತರ ಸಂದರ್ಭಗಳಲ್ಲಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಪ್ರತಿಷ್ಠೆ, ಆಸ್ತಿ, ಒಡವೆಗಳ ಪ್ರದರ್ಶನ ಮಾಡಬಾರದು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.
ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಆಶ್ರಯದಲ್ಲಿ ಭಾನುವಾರ ವಿಟ್ಲ ಶಾಂತಿನಗರದ ಅಕ್ಷಯ ಸಮುದಾಯ ಭವನದ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಯೋಧರಿಗೆ ಗೌರವಾರ್ಪಣೆ ಸಂದರ್ಭ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಅಧ್ಯಕ್ಷ ಮೋಹನ ಗೌಡ ಕಾಯರ್‌ಮಾರ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಸ್ವಾವಲಂಬಿ ಬದುಕು ಸಾಗಿಸುವ ಪ್ರಯತ್ನ ಮಾಡಬೇಕು. ಯುವ ಪೀಳಿಗೆಯು ಸಂಪ್ರದಾಯಗಳನ್ನು ಉಳಿಸಿ, ಬೆಳೆಸಬೇಕು. ಸುಳ್ಯದ ಶಿಲ್ಪಿ ಕುರುಂಜಿ ವೆಂಕಟರಮಣ ಗೌಡ ಅವರ ಸೂತ್ರಗಳನ್ನು ಅನುಸರಿಸಬೇಕು. ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಶಾಂತಿನಗರದಲ್ಲಿ ಒಂದು ಲಕ್ಷ ರೂ. ವೆಚ್ಚದ ಹೈಮಾಸ್ಕ್ ದೀಪವನ್ನು ಅಳವಡಿಸಲಾಗುವುದು. ಕಳೆದ ವರ್ಷ ಭರವಸೆ ನೀಡಿದ ೫ ಲಕ್ಷ ರೂ.ಗಳನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಾಗುವುದು. ಎಲ್ಲ ಸಮುದಾಯದ ಸಂಘಟನೆಗಳಿಗೂ ಇದೇ ರೀತಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಮಂಗಳೂರು ಜಿಲ್ಲಾ ಗೌಡ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ಪುತ್ತೂರು ಗೌಡ ಸೇವಾ ಸಂಘದ ಮಹಿಳಾ ಘಟಕದ ಗೌರವಾಧ್ಯಕ್ಷೆ ಗೌರಿ ಬನ್ನೂರು, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಪ್ರಧಾನ ಕಾರ್ಯದರ್ಶಿ ಮೋನಪ್ಪ ಗೌಡ ಶಿವಾಜಿನಗರ, ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಪೊನ್ನೆತ್ತಡಿ, ಯುವ ವೇದಿಕೆ ಅಧ್ಯಕ್ಷ ವಿನಯ ಸಂಕೇಶ, ಗಿರಿಯಪ್ಪ ಗೌಡ ಗಿರಿನಿವಾಸ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ಸ್ವಜಾತಿ ಸಮಾಜದ ವೃತ್ತ ಯೋಧರಾದ ಪಿ.ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಕಿಶೋರ್ ಕುಮಾರ್ ಎಸ್.ಸಂಕೇಶ, ಅಣ್ಣಪ್ಪ ಗೌಡ ವಿ.ಎ.ಅಳಿಕೆ, ಕೃಷ್ಣ ಗೌಡ ಎಂ.ಮುದೂರು, ಲಿಂಗಪ್ಪ ಗೌಡ ಆಲಂಗಾರು, ಪುರಂದರ ಗೌಡ ದರ್ಬೆ, ಸುಂದರ ಬಿ.ಕಡಂಬು, ವಿಜಯ ಕುಮಾರ್ ಆಜೇರುಮಜಲು, ವೆಂಕಪ್ಪ ಗೌಡ ಅಜಿರಮಜಲು, ಕುಶಾಲಪ್ಪ ಗೌಡ ನಾಯ್ತೊಟ್ಟು, ಲಿಂಗಪ್ಪ ಗೌಡ ಸೆರ್ಕಳ, ಅಶೋಕ್ ಕುಮಾರ್ ಮಾಡತ್ತಾರು, ಕುಂಞಣ್ಣ ಗೌಡ ಬಿ.ಬಂಗೇರಕೋಡಿ, ರಾಜೇಶ್ ಗೌಡ ಪನೆಕಲ, ಮಾಧವ ಗೌಡ ಭಂಡಾರಿಬೆಟ್ಟು, ಸುಂದರ ಗೌಡ ಕಂಪ, ಕರುಣಾಕರ ಗೌಡ ಎಸ್.ಸಂಕೇಶ, ಪ್ರಭಾಕರ ಡಿ.ಕೆ.ಉಳಿ, ಸೇಸಪ್ಪ ಗೌಡ ಹಡೀಲು, ರಾಮಕೃಷ್ಣ ಗೌಡ ಬುಡೋಳಿ, ಪೂವಪ್ಪ ಗೌಡ ಭಂಡಾರಿಬೆಟ್ಟು ಸೇರಿ ಒಟ್ಟು ೨೧ ಮಂದಿಗೆ ಗೌರವಾರ್ಪಣೆ ನಡೆಯಿತು. ಇದೇ ಸಂದರ್ಭ ೩೦ಕ್ಕೂ ಅಽಕ ಶೈಕ್ಷಣಿಕ, ಕ್ರೀಡಾ ಕ್ಷೇತ್ರದ ಯುವ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿ, ಸುಂದರ ಗೌಡ ಕಂಪ ಮಾತನಾಡಿದರು.
ಸಂಘದ ಅಧ್ಯಕ್ಷ ಮೋಹನ ಗೌಡ ಕಾಯರ್‌ಮಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ಗೌರವಾಧ್ಯಕ್ಷ ಲಿಂಗಪ್ಪ ಗೌಡ ಕೆ.ಅಳಿಕೆ ವಂದಿಸಿದರು. ವಿಶ್ವನಾಥ ಗೌಡ ಕುಳಾಲು, ಯತೀಶ್ ಪಾದೆ, ಗಿರಿಯಪ್ಪ ಗೌಡ ಕಾಂತಿಲ ನಿರೂಪಿಸಿದರು.
ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಸಭೆಯ ಬಳಿಕ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here