ವಿಟ್ಲ: ಮಕ್ಕಳ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಬಂಟ್ವಾಳ ತಾಲೂಕು 15ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳದಲ್ಲಿಯೇ ನೀಡಿದ ವಿಷಯಗಳ ಕುರಿತು ಮಕ್ಕಳ ಸ್ವರಚಿತ ಕವನ ರಚನೆ ವಿಭಾಗದಲ್ಲಿ ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದ 6ನೇ ತರಗತಿಯ ಅನುಶ್ರೀ ಕೆ., ಪಲ್ಲವಿ ಟಿ., ಅಭಿವೈಷ್ಣವಿ, 8ನೇ ತರಗತಿಯ ಶ್ರೇಯ ಎನ್. ಶೆಟ್ಟಿ ಭಾಗವಹಿಸಿದರು. ಅನುಶ್ರೀ ಕೆ. ಬರೆದ ’ನೆನಪು’, ಪಲ್ಲವಿ ಟಿ. ಬರೆದ ’ಸಹಬಾಳ್ವೆ’, ಅಭಿವೈಷ್ಣವಿ ಅವರ ’ಬೇಸಾಯ’ ಈ ಮೂರು ಸ್ವರಚಿತ ಕವನಗಳು ಕವಿಗೋಷ್ಟಿಯಲ್ಲಿ ವಾಚಿಸಲು ಆಯ್ಕೆಯಾಗಿದ್ದವು.
ಈ ಕಾರ್ಯಕ್ರಮದ ಸಮಾರೋಪದಲ್ಲಿ ಪೆರುವಾಯಿ ಅನುದಾನ ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿ ಪ್ರದಾನ ಮಾಡಲಾಯಿತು.