ವೀರಕಂಭ: ಯುವ ಕೇಸರಿ ಫ್ಫ್ರೆಂಡ್ಸ್ ಅರೆಬೆಟ್ಟು,ಎರ್ಮೆಮಜಲು, ಇದರ ವತಿಯಿಂದ ಮೂರನೇ ವರ್ಷದ 60 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ಜ.19 ರಂದು (ನಾಳೆ) ಬೆಳಿಗ್ಗೆ 11 ಗಂಟೆಯಿಂದ ವೀರಕಂಭ ಗ್ರಾಮದ ಕೇಪುಳ ಕೊಡಿ ಎಂಬಲ್ಲಿ ನಡೆಯಲಿದೆ. ಈ ಪಂದ್ಯಾಟವು ಹಿಂದೂ ಬಾಂಧವರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.