ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು ವ್ಯವಸಾಯ ಸೇವಾ ಸಹಕಾರ ಸಂಘ ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ, ಸಂಗಂ ಸ್ಟುಡಿಯೋ ಮಾಲಕ ಕಮಲ್ ಶೆಟ್ಟಿ ಬೊಳ್ಳಾಜೆ ಹಾಗೂ ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಪಿಲಿಂಗಾಲ್ ಅವರು ಆಯ್ಕೆಯಾಗಿದ್ದಾರೆ.
ಜ.28ರಂದು ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಮಂಗಳೂರು ಉಪವಿಭಾಗದ ಅಽಕ್ಷಕ ಬಿ.ನಾಗೇಂದ್ರ ಅವರು ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯನ್ನು ಸಂಘದ ಸಿಬಂದಿ ವರ್ಗ ಅಭಿನಂದಿಸಿದರು.
ನಿರ್ದೇಶಕರಾದ ಯಶೋಧರ.ಬಿ.ಶೆಟ್ಟಿ , ಗೋಪಾಲಕೃಷ್ಣ ಚೌಟ, ಸುಽರ್ ಕುಮಾರ್, ವೆಂಕಟೇಶ ಭಟ್,ನಾಗರಾಜ ಶೆಟ್ಟಿ, ಧರ್ಣಪ್ಪ ನಾಯ್ಕ, ಕೊರಗು, ಆಶಾ ಜಯರಾಮ ಶೆಟ್ಟಿ , ಗೋಪಾಲಕೃಷ್ಣ ಶೆಟ್ಟಿ , ವಿವೇಕಾನಂದ ಪೂಜಾರಿ, ರೋಹಿಣಿ , ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಆಲ್ಬರ್ಟ್ ಸಿ.ಡಿಸೋಜ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.
13 ಸ್ಥಾನಗಳಲ್ಲಿ 10 ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು: ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಯಶೋಧರ ಬಿ.ಶೆಟ್ಟಿ , ಗೋಪಾಲಕೃಷ್ಣ ಚೌಟ, ಕಮಲ್ ಶೆಟ್ಟಿ, ಸುಽರ್ ಕುಮಾರ್, ವೆಂಕಟೇಶ ಭಟ್,ನಾಗರಾಜ ಶೆಟ್ಟಿ ,ಹಿಂದುಳಿದ ವರ್ಗ ಪ್ರವರ್ಗ ಎ ಸಾಲಗಾರ ಕ್ಷೇತ್ರದಿಂದ ಸಂಜೀವ ಪೂಜಾರಿ, ಪರಿಶಿಷ್ಠ ಪಂಗಡದ ಧರ್ಣಪ್ಪ ನಾಯ್ಕ, ಪರಿಶಿಷ್ಠ ಜಾತಿಯ ಕೊರಗು, ಸಾಲಗಾರ ಮಹಿಳಾ ಕ್ಷೇತ್ರದಲ್ಲಿ ಆಶಾ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು: ಸಾಲಗಾರರಲ್ಲದ ಕ್ಷೇತ್ರದಿಂದ ಗೋಪಾಲಕೃಷ್ಣ ಶೆಟ್ಟಿ, ಸಾಲಗಾರ ಸಾಮಾನ್ಯ ಹಿಂದುಳಿದ ವರ್ಗ ಪ್ರವರ್ಗ ಎ ವಿವೇಕಾನಂದ ಪೂಜಾರಿ, ಸಾಲಗಾರ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ರೋಹಿಣಿ ಅವರು ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿ, ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕ್ಷಕ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಸಿಬಂದಿ ವರ್ಗ ಸಹಕರಿಸಿದರು.