Saturday, October 21, 2023

ಸಾಹಿತ್ಯ ಸಂಘ ಉದ್ಘಾಟನೆ ಮತ್ತು ಕೃತಿ ಬಿಡುಗಡೆ

Must read

ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಆಂಗ್ಲಭಾಷಾ ವಿಭಾಗದಿಂದ, ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲದ ಸಹ ಪ್ರಾಧ್ಯಾಪಕ ಡಾ. ಶ್ರೀಜ ಅವರು ಸಾಹಿತ್ಯ ಸಂಘವನ್ನು ಡಾ.ಟಿ.ಕೆ. ರವೀಂದ್ರನ್‌ ಅವರ ತುಳುವಿನಿಂದ ಆಂಗ್ಲಭಾಷೆಗೆ ಅನುವಾದಿಸಿದ ಒಂದು ಕೃತಿಯನ್ನು ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು, ಆಂಗ್ಲಭಾಷೆಯ ಮಹತ್ವದ ಕುರಿತು ಪ್ರಾಸ್ತಾವಿಸಿ ವಿದ್ಯಾರ್ಥಿಗಳಲ್ಲಿ ಆಂಗ್ಲಭಾಷೆಯ ಕಲಿಕೆಗೆ ಒತ್ತುಕೊಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್.ಬಿ. ಶೆಟ್ಟಿ ಅವರು ಬಿಡುಗಡೆಗೊಂಡ ಕೃತಿಯ ಬಗ್ಗೆ ಮಾತನಾಡಿ, ಮನುಷ್ಯ ಪ್ರಕೃತಿಯೊಂದಿಗೆ ಹೇಗೆ ಹೊಂದಿಕೊಂಡು ಬದುಕಬೇಕು ಎಂದು ಈ ಕಾದಂಬರಿ ಸಾರುತ್ತದೆ ಎಂದು ಅಭಿಪ್ರಾಯಪಟ್ಟರು ಮತ್ತು ತುಳುವಿನಿಂದ ಆಂಗ್ಲಭಾಷೆಗೆ ಕೃತಿಗಳನ್ನು ಅನುವಾದ ಮಾಡುವುದು ಒಂದು ಅಮೂಲ್ಯ ಕೊಡುಗೆಯಾಗುತ್ತದೆ ಎಂದು ವಿಶ್ಲೇಷಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಡಾ.ಶ್ರೀಜ ಅವರು ದ್ವಿತೀಯ ಬಿ.ಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಹಾಗೆ ವಿಶ್ವವಿದ್ಯಾನಿಲಯವು ಪಠ್ಯಕ್ರಮದಲ್ಲಿ ನಿಗದಿಪಡಿಸಲಾದ ಕಾದಂಬರಿಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ವಿದ್ಯಾ.ಕೆ.ಎಸ್‌., ಕಾರ್ಯಕ್ರಮ ಸಂಯೋಜಕ ಡಾ.ಟಿ.ಕೆ. ರವಿಂದ್ರನ್, ಐಕ್ಯೂ.ಎ.ಸಿ ಸಂಯೋಜಕ ಡಾ.ರವಿ.ಎಂ.ಎನ್ ಉಪಸ್ಥಿತರಿದ್ದರು.

ಮಾಯಾಇಂದ್‌ವಾರ್ ಸ್ವಾಗತಿಸಿ, ಬಿಶಾಲ್‌ಕರ್‌ಹಾರ್ ವಂದಿಸಿದರು. ಕೆ.ಶ್ವೇತಾ ನಾಯಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಜೋಲನ್ ಕಾರ್ಯಕ್ರಮ ನಿರೂಪಿಸಿದರು.

More articles

Latest article