ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ ರಾಷ್ಟ್ರೀಯ ಸೇವಾ ಯೋಜನೆ, ರೋವರ್‍ಸ್ ಮತ್ತು ರೇಂಜರ್‍ಸ್ ಘಟಕ ಹಾಗೂ ಯೂತ್ ರೆಡ್‌ಕ್ರಾಸ್ ಘಟಕದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ಸಪ್ತಾಹವನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಯಾಗಿ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜ್ ನ ಇತಿಹಾಸ ಉಪನ್ಯಾಸಕ ಸುಧಾಕರ ಪ್ರಭು ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು, ವಿಚಾರ ಧಾರೆಗಳು ಪ್ರಸ್ತುತ, ಸರ್ವಕಾಲಿಕ ಎಂದರು. ನಿರ್ದಿಷ್ಟಗುರಿ, ಆತ್ಮವಿಶ್ವಾಸ, ಬದ್ಧತೆ, ಪ್ರಮಾಣಿಕತನ ಸಂಸ್ಕಾರ ಆಚಾರ ವಿಚಾರವನ್ನು ಮೈಗೂಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಮಾನವ ಧರ್ಮವನ್ನು ನಾವು ಪಾಲಿಸಿದಲ್ಲಿ ಜಾಗತೀಕ ಶಾಂತಿ ಸಾಧ್ಯ ಎಂದರು. ಡಾ. ರವಿ ಎಂ. ಎನ್. ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಮೇರಿ ಎಂ.ಜೆ. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹಾಗೂ ಪ್ರೊ. ಉಷಾ ರೋವರ್‍ಸ್ ಅಧಿಕಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ವಿವೇಕಾನಂದರ ಚಿಂತನೆಗಳ ಬಗ್ಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಕಾಲೇಜಿನ ಗ್ರಂಥಾಲಯದಲ್ಲಿ ವಿವೇಕಾನಂದರ ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದೀಕ್ಷಿತಾ ಮತ್ತು ತಂಡ ದ್ವಿತೀಯ ಬಿ.ಕಾಂ. ಪ್ರಾರ್ಥಿಸಿದರು, ರಮ್ಯಾ ತೃತೀಯ ಬಿ.ಕಾಂ. ಸ್ವಾಗತಿಸಿ, ಭವ್ಯ ತೃತೀಯ ಬಿ.ಕಾಂ. ವಂದಿಸಿದರು. ಪವಿತ್ರ ದ್ವಿತೀಯ ಬಿ.ಕಾಂ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here