Wednesday, April 10, 2024

ಸಮಾಜ ಸೇವೆಯ ಮೂಲಕ ಧರ್ಮಾಚರಣೆ

ಉಜಿರೆ: “ಶಿವನನ್ನು ಲಯಕರ್ತ ಎಂದು ಕರೆಯುತ್ತಾರೆ. ಸೃಷ್ಠಿಯಲ್ಲಿ ಎಲ್ಲವೂ ಆದಿಯಿಂದ ಅಂತ್ಯ ದೆಡೆಗೆ ಹೋಗುತ್ತದೆ. ಶಾಶ್ವತವಾಗಿ ಈ ಪ್ರಪಂಚದಲ್ಲಿ ಯಾವುದೇ ಚರಾಚರ ವಸ್ತುಗಳು ಇರಲು ಸಾಧ್ಯವಿಲ್ಲ. ಎಲ್ಲವೂ ನಾಶವಾಗುವುದು ಸ್ವಾಭಾವಿಕ ಇದು ಶಿವನ ತತ್ವ.” ಪ್ರಪಂಚದಲ್ಲಿ ನಾನಾ ಧರ್ಮಗಳು ಚಾಲ್ತಿಯಲ್ಲಿದೆ. ಆದರೆ ಎಲ್ಲಾ ಧರ್ಮಗಳ ತಾತ್ಪರ್ಯವು ಮಾನವೀಯತೆ ಆಗಿದೆ. ಆದರೆ ಜನರು ಧರ್ಮವನ್ನು ಅರ್ಥೈಸಿಕೊಳ್ಳುವುದರಲ್ಲಿ ವ್ಯತ್ಯಾಸವಾಗುವ ಕಾರಣ ಧಾರ್ಮಿಕ ಕ್ಲೇಶಗಳು ಸಮಾಜದಲ್ಲಿ ಉಂಟಾಗುತ್ತದೆ.ಧಾರ್ಮಿಕ ಮುಖಂಡರುಗಳು ಈ ವ್ಯತ್ಯಾಸಗಳನ್ನು ಹೊಗಲಾಡಿಸಲು ಪ್ರಯತ್ನಿಸಬೇಕಾಗಿದೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿ ಯುನೈಡೆಡ್ ಮೆಥೊಡಿನಸ್ಸ್‍ ಚರ್ಚ್ ವತಿಯಿಂದ ಶ್ರೀ ಕ್ಷೇತ್ರಕ್ಕೆ ಅಮೇರಿಕಾದಿಂದ ಬಂದಂತಹ ವಿದ್ಗ್ಯಾರ್ಥಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಕ್ಷೇತ್ರವು ಧರ್ಮಸ್ಥಳವು ನಡೆಸುತ್ತಿರುವ ಜನಕಲ್ಯಾಣ ಕಾರ್ಯಕ್ರಮಗಳ ಅಧ್ಯಯನಕ್ಕೆ ಈ ತಂಡವು ಆಗಮಿಸಿತ್ತು. ಶ್ರೀ ಕ್ಷೇತ್ರದ ವಿವಿಧ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದರು.ತಂಡದಲ್ಲಿ ಡಾ. ಇ.ವಿ.ಎಸ್ ಮಾಬೆನ್, ಪ್ರೋಪೆಸರ್, ಎ.ಜೆ. ಇನ್ಸ್‍ಟ್ಯೂಟ್‍ ಆಫ್ ಮೆಡಿಕಲ್ ಕಲಾ ಸಾಯನ್ಸ್, ಬಿಷಬ್ ಸುದರ್ಶನ್‍ ದೇವಾಧಾರ್, ಮೆಥೋಡಿಸ್ಟ್‍ ಚರ್ಚ್, ನ್ಯೂ ಇಂಗ್ಲೆಂಡ್‍ ಕಾನ್ಪರೆಸ್ಸ್, ಬಿಷಬ್‍ ಈಸ್ಟರ್‍ಲಿಂಗ್, ಮತ್ತು ಟೆಡ್‍ ಆಂಡರ್‍ಸನ್ ಮತ್ತು ಮೇರಿ ಆಂಡರ್‍ಸನ್‍ ಇವರು ವಿಧ್ಯಾರ್ಥಿಗಳ ತಂಡವನ್ನು ಪ್ರತಿನಿಧಿಸಿದರು.

More from the blog

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

ಅಕ್ರಮ ಮರಳು ಸಾಗಾಟ: ವಾಹನ ಸಹಿತ ಆರೋಪಿ ಅರೆಸ್ಟ್

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟದ ಎರಡು ಪಿಕಪ್‌ ವಾಹನ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ವೇಣೂರು ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವೇಣೂರಿನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ...