ಬಂಟ್ವಾಳ: ಶಿಕ್ಷಕರು ಮತ್ತು ಪೋಷಕರ ಸಹಕಾರವಿದ್ದಾಗ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗುತ್ತದೆ ಜೊತೆಗೆ ಪಠ್ಯೇತರ ಚಟುವಟಿಕೆ ಮತ್ತು ನಡತೆ ಸುಧಾರಿಸಿ ಮಾನವೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ ಎಂದು ಮಾಜಿ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ನೂ ಆದ ಯು.ಟಿ. ಖಾದರ್‌ ಅವರು ತುಂಬೆ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಮಾವೇಶ ಹಾಗೂ ಕ್ರೀಡಾಕೂಟದಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮುಹಿಯುದ್ದೀನ್‌ ಎಜುಕೇಶನಲ್‌ ಟ್ರಸ್ಟ್(ರಿ) ಇದರ ಸಂಸ್ಥಾಪಕ ಡಾ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಧಕ ಹಿರಿಯ ವಿದ್ಯಾರ್ಥಿಗಳಾದ ಡಾ. ಅನ್ವರ್‌ ಅಮೆಮಾರ್ ಸೂಫಿ, ಡಾ. ಮಹಮ್ಮದ್ ಆಸೀಫ್, ಡಾ. ಅಭಿಮಾನ್ ಬಲ್ಯಾಯ, ಜಿ. ಎಸ್. ಗೋಪಾಲ್‌ ರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ  ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ತುಂಬೆ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್, ಕಾರ್‍ಯಕಾರಿ ಸಮಿತಿ ಸದಸ್ಯರು, ರಕ್ಷ ಕರಾದಹನೀಫ್ ಸಜೀಪ, ನಿವೃತ್ತ ಪ್ರಾಧ್ಯಾಪಕರಾದ ಫಲೂಲ್ ಮಾಸ್ಟರ್ ಬೆದ್ರೋಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ದೈಹಿಕ ಶಿಕ್ಷಕ ಜಗದೀಶ್‌ ರೈ, ಬಿ.ನಡುವಳಚ್ಚಿಲ್, ಸಾಯಿರಾಂ ನಾಯಕ್, ಮೋಲಿ ಎಡ್ನಾಗೊನ್ಸಾಲ್ವ್‌ಸ್‌ ಇವರನ್ನು ಗೌರವಿಸಲಾಯಿತು.ತುಂಬೆ ಪ. ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವರು ಅಭಿನಂದನಾ ಭಾಷಣ ಮಾಡಿದರು.ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ನಿಸಾರ್‌ಅಹಮ್ಮದ್ ವಳವೂರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಗದೀಶರೈ ಬಿ. ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು.ಹಿರಿಯ ಉಪನ್ಯಾಸಕ ಎಸ್. ಭಟ್ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here