ಬಂಟ್ವಾಳ: ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿಆರ್ ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ತಲಪಾಡಿ ಜುಮಾ ಮಸೀದಿ ಹಾಗೂ ಆಡಳಿತ ಕಮಿಟಿ ವತಿಯಿಂದ ಶುಕ್ರವಾರ ಪೋಸ್ಟರ್ ಪ್ರದರ್ಶನ ನಡೆಯಿತು.
ತಲಪಾಡಿ ಮಸೀದಿ ಖತೀಬ್ ಯಾಕೂಬ್ ಫೈಝಿ ಅವರು ಸಂವಿಧಾನ ವಿರೋಧಿ ಕಾನೂನಿನ ಬಗ್ಗೆ ಜಮಾಅತ್ ಸದಸ್ಯರಿಗೆ ಮಾಹಿತಿ, ಕಾಯ್ದೆ ಹಿಂಪಡೆಯುವ ತನಕ ಹೋರಾಟ ನಡೆಸುವಂತೆ ತಿಳಿಸಿದರು.
ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಈ ಮೂರು ಕಾಯ್ದೆಗಳಿಗಾಗಿ ತಲಪಾಡಿಗೆ ಮಾಹಿತಿ ಕೇಳಲು ಬಂದರೆ ಜಮಾಅತಿಗರು ಮಾಹಿತಿ ನೀಡದಂತೆಯೂ, ಈ ಕಾಯ್ದೆಗಳ ವಿರುದ್ಧ ಆಡಳಿತ ಕಮಿಟಿ ಬದ್ಧವಾಗಿರುವುದಾಗಿ ಈ ವೇಳೆ ತಿಳಿಸಲಾಯಿತು.
ಸಂವಿಧಾನ ವಿರೋಧಿ ಕಾಯ್ದೆಯ ಮನೆ, ಮನೆಗೆ ಅಂಟಿಸುವ ಪೋಸ್ಟರ್ ಅನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಬಳಿಕ ಕೇಂದ್ರ ಸರಕಾರ ಜನವಿರೋಧಿ ನೀತಿ, ಕಾಯ್ದೆಗಳ ವಿರುದ್ಧ ಆಝಾದಿ ಘೋಷಣೆ ಕೂಗಿದರು.