ಬಂಟ್ವಾಳ: ಸಿದ್ಧಕಟ್ಟೆ ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯೀ ದೇವಸ್ಥಾನ ಇದರ ಸಹಯೋಗದಲ್ಲಿ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯೀ ಫ್ರೆಂಡ್ಸ್ ಸಿದ್ಧಕಟ್ಟೆ ಅವರ ಪ್ರಾಯೋಜಕತ್ವದಲ್ಲಿ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ 28ನೇ ಪದ್ಮಶಾಲಿ ಕ್ರೀಡೋತ್ಸವ ಸಿದ್ಧಕಟ್ಟೆ ಶ್ರೀ ಮಹಮ್ಮಾಯೀ ಕ್ರೀಡಾಂಗಣ ಸಂಗಬೆಟ್ಟು ಇಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯೀ ದೇವಸ್ಥಾನದ ಚಂದ್ರಹಾಸ ಗುರಿಕಾರ್ ಉದ್ಘಾಟಿಸಿದರು. ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಅಧ್ಯಕ್ಷ ಎಂ.ಜಯರಾಮ್ ಮಂಗಳೂರು ಇವರು ಅಧ್ಯಕ್ಷತೆ ವಹಿಸಿದ್ದರು. ಪ್ರಪ್ರಥಮ ಪದ್ಮಶಾಲಿ ಕ್ರೀಡೋತ್ಸವದ ಸಂಘಟಕ ನೋಣಯ್ಯ ಶೆಟ್ಟಿಗಾರ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ , ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಎ.ಪಿ.ಎಂ.ಸಿ.ಸದಸ್ಯ ಪದ್ಮರಾಜ್ ಬಳ್ಳಾಲ್, ದ.ಕ.ಜಿಲ್ಲಾ ಪದ್ಮಶಾಲಿ ಸಮಾಜ ಸೇವಾ ಕೂಟ ಬೆಂಗಳೂರು ಇದರ ಅಧ್ಯಕ್ಷ ಎಂ.ಪ್ರಭಾಕರ್ ಶೆಟ್ಟಿಗಾರ್, ವಿಠಲ ಶೆಟ್ಟಿಗಾರ್, ರಘುರಾಮ ಶೆಟ್ಟಿಗಾರ್, ವಿಠಲ ಶೆಟ್ಟಿಗಾರ್, ವಿನುತಾ ಶೆಟ್ಟಿಗಾರ್, ಕೆ. ಸುರೇಂದ್ರ ಶೆಟ್ಟಿ ಮಂಗಳೂರು, ಲಲಿತಾ ಶೆಟ್ಟಿಗಾರ್, ರಾಘವ ಶೆಟ್ಟಿಗಾರ್, ಗಂಗದರ ಶೆಟ್ಟಿಗಾರ್, ಭೋಜ ಶೆಟ್ಟಿಗಾರ್, ವಾಮನ ಶೆಟ್ಟಿಗಾರ್, ಧರ್ಮಣ ಶೆಟ್ಟಿಗಾರ್, ನವೀನ್ ಕುಮಾರ್ ಶೆಟ್ಟಿಗಾರ್, ಭವ್ಯ ಪುರುಷೋತ್ತಮ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.