ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರಲ್ಲಿ ಹರಿಕಥೆ ಕಾರ್ಯಕ್ರಮ ಜರುಗಿತು. ‘ಭೀಷ್ಮಪರ್ವ’ ಎಂಬ ಮಹಾಭಾರತದ ಕಥಾ ಪ್ರಸಂಗವನ್ನು ಬದ್ರಗಿರಿ ಅಚ್ಯುತ್ ದಾಸರ ಶಿಷ್ಯ ಈಶ್ವರ್ ಪ್ರಸಾದ್ ಕೊಪ್ಪೇಸರ್ ಅವರು ನಡೆಸಿಕೊಟ್ಟರು. ಅವರು 30 ವರ್ಷಗಳಿಂದ ಗುಜರಾತ್, ಕೇರಳ, ಮಹಾರಾಷ್ಟ್ರ, ನೇಪಾಲ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಹಾರ್ಮೋನಿಯಂನಲ್ಲಿ ರಾಮಚಂದ್ರ ಹೆಗಡೆ ಕೋನೇಸರ ಸಹಕರಿಸಿದರು ಹಾಗೂ ತಬಲದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಹರ್ಷಿತ್ ಸಹಕರಿಸಿದರು.
ಅಧ್ಯಾಪಕರಾದ ಅನ್ನಪೂರ್ಣ ಹಾಗೂ ನಾಗರಾಜು, ಶಾಲು ಹೊದಿಸಿ ಗೌರವಾರ್ಪಸಿದರು. ಹಾಗೂ ಸುಮಂತ್ ಆಳ್ವ ಈ ಕಾರ್ಯಕ್ರಮವನ್ನು ನಿರೂಪಿಸಿದರು.