ಬಂಟ್ವಾಳ: ಶ್ರೀರಾಮ ಪದವಿ ಕಾಲೇಜಿನ ದಶಮಾನೋತ್ಸವದ ಪ್ರಯುಕ್ತ ಪ್ರಭವ ವಿಜ್ಞಾನ ಸಂಘ ಮತ್ತು ಪ್ರಸಾದ್ ನೇತ್ರಾಲಯ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಒಂದು ವಾರದ ಕಾಲ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಶ್ರೀರಾಮ ವಿದ್ಯಾಕೇಂದ್ರ ಪ್ರತೀ ವರ್ಷ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯು ಸಂಸ್ಕಾರಯುತವಾದ ವಿದ್ಯಾದಾನದ ಜೊತೆಗೆ ಸಮಾಜದ ಹಿತವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಒಟ್ಟು 3,556 ಜನ ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ. 30೦ಕ್ಕೂ ಹೆಚ್ಚಿನವರಿಗೆ ಕನ್ನಡಕ, 33 ಮಂದಿಗೆ ಶಸ್ತ್ರಚಿಕಿತ್ಸೆ ಹಾಗೂ 186 ಮಂದಿಗೆ ವಿಶೇಷ ಚಿಕಿತ್ಸೆ ನೀಡಲು ಪ್ರಸಾದ್ ನೇತ್ರಾಲಯ ಸಿದ್ಧತೆ ನಡೆಸಿದೆ.
ಪ್ರಸಾದ್ ನೇತ್ರಾಲಯದ ಒಬ್ಬ ವೈದ್ಯಾಧಿಕಾರಿ, 7 ಜನ ಸಹಾಯಕ ಸಿಬ್ಬಂದಿ, ಪಿಆರ್‌ಒ ಮಧುಕರ್ ಈ ಶಿಬಿರದ ವ್ಯವಸ್ಥೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಸಾದ್ ನೇತ್ರಾಲಯದ ಸಂಸ್ಥಾಪಕ ಡಾ. ಕೃಷ್ಣಪ್ರಸಾದ್ ಅವರು ಸಲಹೆ, ಮಾರ್ಗದರ್ಶನ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here