ಬಂಟ್ವಾಳ: ಸಜೀಪನಡು ಗ್ರಾಮದ ದೇರಾಜೆ ಕುಟುಂಬಿಕರ ಪರಿವಾರ ದೈವಸ್ಥಾನದಲ್ಲಿ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ 15ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ತಡೆಗೋಡೆಯನ್ನು ದ.ಕ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಮಾಜಿ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಸಜೀಪ ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ಶ್ರೀ ನಾಗದೇವರ ಪ್ರತಿಷ್ಟಾಪನೆಯು ಬಹಳ ವಿಜೃಂಭನೆಯಿಂದ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಸಮಾಜಸೇವೆಗಾಗಿ ಎಸ್.ಅಬೂಬಕ್ಕರ್ ಸಜೀಪ, ಹಾಗೂ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದ ದೇರಾಜೆ ಕುಟುಂಬದ ದಿ. ರಾಘವ ಪೂಜಾರಿಯವರ ಪುತ್ರನಾದ ಶಶಾಂಕ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಪುರುಶೋತ್ತಮ ಪೂಜಾರಿ ದೇರಾಜೆ, ರಮೇಶ್ ಬಾಗಲಕೋಡಿ, ಆನಂದ ಸೋಮೇಶ್ವರ, ರಂಜಿತ್ ದೇರಾಜೆ, ಉದಯ ಬಜಾಲ್, ದೈವಪಾತ್ರಿಯಾದ ರಾಮ ಬರೆ ದೇರಾಜೆ ಉಪಸ್ಥಿತರಿದ್ದರು.