ತುಂಬೆ: ನಮ್ಮ ಭಾರತದ ಸಂವಿಧಾನವು ಜಾಗತಿಕವಾಗಿ ಬೃಹತ್ ಸಂವಿಧಾನವಾಗಿದ್ದು, ಲಿಖಿತ ಸಂವಿಧಾನವಾಗಿದೆ. ಬಹುಮತದಿಂದ ತಿದ್ದುಪಡಿ ಮಾಡಬಹುದಾದ ಈ ಸಂವಿಧಾನವು ಜಾತ್ಯಾತೀತ ಪ್ರಜಾಸತ್ತಾತ್ಮಕ ರಾಷ್ಟ್ರಕ್ಕೆ ಹೇಳಿ ಮಾಡಿಸಿದ ಸಂವಿಧಾನವಾಗಿದೆ. ಈ ಸಂವಿಧಾನದ ಪ್ರಧಾನ ಕತೃ ಡಾ| ಬಿ.ಆರ್.ಅಂಬೇಡ್ಕರ್‌ ಅವರು ನಮ್ಮ ದೇಶದ ಓರ್ವ ಜ್ಞಾನಿಯಾಗಿದ್ದರು ಎಂಬುದಾಗಿ ದಿನೇಶ ಶೆಟ್ಟಿ ಅಳಿಕೆ ಹೇಳಿದರು.
ಅವ ರುತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವರು ಮಾತನಾಡಿ, ಜನರಿಂದ ಜನರಿಗಾಗಿ ಜನರೇ ರೂಪಿಸಿರುವ ಸರಕಾರ ಪ್ರಜಾಪ್ರಭುತ್ವದ ಆದರ್ಶವನ್ನು ಸಾರುತ್ತದೆ.ನಮ್ಮ ದೇಶವು ಗಣತಂತ್ರ ದೇಶವಾಗಿ ಸಮರ್ಥವಾಗಿ 70 ವರ್ಷಗಳನ್ನು ಕ್ರಮಿಸಿ 71ನೇ ಆಚರಣೆಯನ್ನು ಆಚರಿಸುತ್ತಿದ್ದು, ಜಗತ್ತಿನಲ್ಲೇ ಬಹು ಸಂಸ್ಕೃತಿ, ಬಹುಮತೀಯ ಆದರ್ಶ ದೇಶವಾಗಿ ಗುರುತಿಸಲ್ಪಟ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ತುಂಬೆ ವಿದ್ಯಾ ಸಂಸ್ಥೆಗಳ ’ವೆಬ್‌ಸೈಟ್ ವಿಳಾಸ’ ವನ್ನು ಅವರು ಬಿಡುಗಡೆಗೊಳಿಸಿದರು.ಯೋಗೀಶ್ ಬಿ.ತುಂಬೆ ವೆಬ್‌ಸೈಟ್ ವಿವರ ನೀಡಿದರು.ಕಾರ್ಯಕ್ರಮದಲ್ಲಿ ಸಾಯಿರಾಂ ನಾಯಕ್, ಜಗದೀಶರೈ ಬಿ., ಮೋಲಿ ಎಡ್ನಾಗೊನ್ಸಾಲ್ವ್‌ಸ್, ಅಶೋಕ್ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ವಿ.ಎಸ್. ಭಟ್ ಸ್ವಾಗತಿಸಿ, ನಿರೂಪಿಸಿದರು.ಮುಖ್ಯ ಶಿಕ್ಷಕ ಶ್ರೀನಿವಾಸ ಕೆದಿಲ ವಂದಿಸಿರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here