ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಹೋಗಿದ್ದು ಕಾಂಗ್ರೆಸ್ : ರಾಜನಾಥ್ ಸಿಂಗ್
ಬಂಟ್ವಾಳ : ಧರ್ಮದ , ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡಲು ಹೋಗಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ.
ಬಿಜೆಪಿ ದೇಶದ ರಕ್ಷಣೆಗೊಸ್ಕರ ಕೆಲಸ ಮಾಡುತ್ತಿದೆ. ಅದನ್ನು ಸಹಿಸದ ಕಾಂಗ್ರೇಸ್ ಬೇರೆ ಬೇರೆ ವಿಚಾರಗಳ ಮೂಲಕ ಬಿಜೆಪಿ ಮೇಲೆ ಸವಾರಿ ಮಾಡುವ ವಿಫಲ ಪ್ರಯತ್ನ ಮಾಡುತ್ತಿದೆ ಹೊರತು ಅದರಲ್ಲಿ ಸಫಲತೆ ಕಂಡಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಅವರು ಇಂದು ಸಂಜೆ ಮಂಗಳೂರಿನ ಬಂಗ್ರಕೂಳೂರಿನಲ್ಲಿ ನಡೆದ ಸಿಎಎ ಪರವಾದ ಬಿಜೆಪಿ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ ಇರಬಾರದು ಎಂಬ ಅನೇಕರ ಕನಸು, ಈ ಕನಸಿಗೆ ಜೀವ ತುಂಬುವ ಕೆಲಸ ಬಿಜೆಪಿ ಮಾಡುತ್ತಿದೆ.
ಭಾರತಕ್ಕೆ ಇರುವುದು ಒಂದೇ ತ್ರಿವರ್ಣ ಧ್ವಜ. ಪೌರತ್ವ ತಿದ್ದುಪಡಿ ಕಾಯ್ದೆ ಮಹಾತ್ಮ ಗಾಂಧಿ ಕನಸಾಗಿತ್ತು. ಗಾಂಧಿ ಕನಸನ್ನು ಬಿಜೆಪಿ ಪೂರೈಸಿದೆ ಎಂಬ ತೃಪ್ತಿ ಎಲ್ಲರಲ್ಲಿಯೂ ಇದೆ ಅವರು ಹೇಳಿದರು. ‌

ಕಳೆದ ಬಾರಿಯ ನಮ್ಮ ಅಜೆಂಡಾದಲ್ಲಿ ಏನೇನೂ ಭರವಸೆಗಳನ್ನು ನೀಡಿದ್ದೇವೆ ಅದೆಲ್ಲವನ್ನು ಪ್ರಾಮಾಣಿಕ ವಾಗಿ ಈಡೇರಿಸಿದ್ದೇವೆ. ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದ 370 ವಿಧಿ ರದ್ದತಿ ಮಾಡಿದ್ದೇವೆ. ಶೀಘ್ರವೇ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಲಿದ್ದೇವೆ, ರಾಮಮಂದಿರ ನಿರ್ಮಾಣದ ಮೂಲಕ ನಿಮಗೆಲ್ಲರಿಗೂ ಪೂಜೆ ಮಾಡುವ ಅವಕಾಶವಿದೆ ಎಂದವರು ಹೇಳಿದರು.
ಸ್ವಾತಂತ್ರ್ಯ ಬಂದ ಬಳಿಕವೂ
ತಲಾಖ್ ಮೂಲಕ ಮುಸ್ಲಿಂ ಹೆಣ್ಮಕ್ಕಳು ತೊಂದರೆ ಅನುಭವಿಸುತ್ತಿದ್ದರು.
ಆದರೆ ಮೋದಿಯವರು ಪ್ರಧಾನಮಂತ್ರಿಯಾದ ಬಿಜೆಪಿ ಆಡಳಿತದ ಪಕ್ಷ ಅಧಿಕಾರಕ್ಕೆ ಬಂದ ನಂತರ ತ್ರಿವಳಿ ತಲಾಖ್ ರದ್ದು ಮಾಡಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.

ಎನ್‌ಪಿಆರ್ ನಿಂದ ಏನು ತೊಂದರೆ ಇದೆ..? ದೇಶದ ಜನರ ಬಗ್ಗೆ ಲೆಕ್ಕ ಇಟ್ಟುಕೊಳ್ಳಬಾರದೇ..? ಎನ್‌ಆರ್‌ಸಿ ಬಗ್ಗೆ ಇವಾಗ ಏನೂ ಚರ್ಚೆಯಾಗಿಲ್ಲ. ಆದರೆ ದೇಶದ ಮುಸ್ಲಿಮರಲ್ಲಿ ಭಯ ಮೂಡಿಸಲಾಗುತ್ತಿದೆ. ಭಾರತದ ಮುಸ್ಲಿಮರಿಗೆ ಯಾರೂ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಮುಸ್ಲಿಮರೇ ಕೇಂದ್ರ ಸರ್ಕಾರ ನಿಮಗೆ ರಕ್ಷಣೆ ನೀಡುತ್ತದೆ. ನಮ್ಮದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಗಿದೆ. ಪೌರತ್ವ ಕಾಯ್ದೆಯಿಂದ ದೇಶದ ಜನರಿಗೆ ಏನೂ ತೊಂದರೆ ಆಗುವುದಿಲ್ಲ ಎಂದರು.
ಯಾರು ಭಯಪಡುವ ಅಗತ್ಯವಿಲ್ಲ.
ಮತಬ್ಯಾಂಕ್ ರಾಜಕೀಯ ನಡೆಯುತ್ತಿದ್ದು ಜನರು ಅರ್ಥಮಾಡಿಕೊಳ್ಳಲು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು , ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಶಾಸಕ ರಾದ ಎಸ್ ಅಂಗಾರ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಡಾ! ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ಹರೀಶ್ ಪೂಂಜಾ ಮತ್ತಿತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here