ಬಂಟ್ವಾಳ: ಶ್ರೀ ಮುಘೇಂದ್ರ ಮಿತ್ರ ಮಂಡಳಿ ಹಾಗೂ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ವನಿತಾ ಸಮಾಜ, ಪುತ್ತೂರು ವಿಭಾಗ ಭಾರತೀಯ ಅಂಚೆ ಇಲಾಖೆ, ಪಿಲಾತಬೆಟ್ಟು ಗ್ರಾ.ಪಂ. ಇವರ ಜಂಟಿ ಆಶ್ರಯದಲ್ಲಿ ಆಧಾರ್ ಮೇಳ( ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ನೋಂದಣಿ) ಜ. 13 ಹಾಗೂ ಜ.15 ರಂದು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಸಭಾಭವನದಲ್ಲಿ ಜರಗಲಿದೆ. ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ 8.30ಕ್ಕೆ ಪ್ರಾರಂಭವಾಗಲಿದೆ. ಆಧಾರ್ ತಿದ್ದುಪಡಿಗೆ ಹೆಸರು ನೋಂದಣಿ ಮಾಡಿಸುವವರು ಜ.10 ರೊಳಗೆ ನೊಂದಾಯಿಸಬೇಕು ಎಂದು ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.