ಪುಣಚ: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪರಿಯಾಲ್ತಡ್ಕ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಧಾರಿಣಿ ಜನಸೇವಾ ಕೇಂದ್ರವನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುಣಚ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಆರ್. ರಂಗಮೂರ್ತಿ, ಕ್ಯಾಂಪ್ಕೊ ಅಧ್ಯಕ್ಷರಾದ ಎಸ್.ಆರ್. ಸತೀಶ್ವಂದ್ರ, ಕೊಳ್ನಾಡು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ತಾಲೂಕು ಪಂಚಾಯತ್ ಸದಸ್ಯೆ ಕವಿತಾ ಸುಬ್ಬನಾಯ್ಕ, ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಬೈಲುಗುತ್ತು ಮಾರಪ್ಪ ಶೆಟ್ಟಿ ಪಂಚಾಯತ್ ಸದಸ್ಯರಾದ ಉದಯ ಕುಮಾರ್ ದಂಬೆ, ಬಾಲಕೃಷ್ಣ ಎಚ್, ಅಮಿತ, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್, ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ದೇವಿಪ್ರಸಾದ್ ಕಲ್ಲಾಜೆ, ನೀರ್ಕಜೆ ಜಯಶ್ಯಾಂ, ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ದ.ಕ ಜಿಲ್ಲಾ ಸಿಎಸ್‌ಸಿ ಮ್ಯಾನೇಜರ್ ಸವಿನ್, ಪುಣಚ ಬಿಲ್ಲವ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಮೂಡಂಬೈಲು, ಜಯರಾಮ್ ಮೂಡಂಬೈಲು, ಗುರುವಪ್ಪ, ಸರಿತಾನವೀನ್ ಮೇದಿನಿ ಮೂಡಂಬೈಲು ಮತ್ತು ಪವಿತ್ರಾ ಹರೀಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರ ಮೇದಿನಿ, ಜನಸೇವಾ ಕೇಂದ್ರದ ಮಾಲಕ ನವೀನ್ ಎಂ ಮೂಡಂಬೈಲು ಮತ್ತು ಹರ್ಷಿತಾ ಸ್ಟುಡಿಯೋ ಮಾಲಕ ಹರೀಶ್ ಎಂ. ದಲ್ಕಾಜೆ ಸ್ವಾಗತಿಸಿದರು. ಪೂಜಾ ಕಾರ್ಯಕ್ರಮವನ್ನು ವೇ.ಮೂ. ಕಬಕ ಶ್ರೀಧರ ಭಟ್ ನೆರವೇರಿಸಿದರು.