ಬಂಟ್ವಾಳ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಶ್ರೀ ಪೊಳಲಿ ಕ್ಷೇತ್ರಕ್ಕೆ ಬಂಟ್ವಾಳ ತಾಲೂಕು ಕಚೇರಿ ವತಿಯಿಂದ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎಸ್. ಆರ್.ರಶ್ಮಿ ಅವರು ವಿದ್ಯುಕ್ತ ಚಾಲನೆ ನೀಡಿದರು.
15ರಂದು ಬೆಳಗ್ಗೆ 6ರ ವೇಳೆಗೆ ಬಂಟ್ವಾಳ ಮಿನಿ ವಿಧಾನ ಸೌಧದ ಮುಂಭಾಗದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಿಂದ ಪೊಳಲಿ ಶ್ರೀಕ್ಷೇತ್ರಕ್ಕೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು.
ಬಿಸಿರೋಡಿನಿಂದ ಪೊಳಲಿ ದೇವಸ್ಥಾನಕ್ಕೆ ತೆರಳಿ ಬಂಟ್ವಾಳ ತಾಲೂಕಿಗೆ ಒಳ್ಳೆಯದನ್ನು ಉಂಟು ಮಾಡಲಿ ಎಂದು ದೇವರ ಮುಂದೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ತಾಲೂಕಿನ ಜನತೆಗೆ ತಾಲೂಕಿಗೆ ಒಳ್ಳೆಯದನ್ನು ಬಯಸಿ ಅಮ್ಮನೆಡೆಗೆ ನಮ್ಮ ನಡಿಗೆ ಮಾಡಿದ್ದೇವೆ. ಸರಕಾರಿ ರಜಾ ದಿನವನ್ನು ತಾಲೂಕು ಕಂದಾಯ ಇಲಾಖೆಯ ಸಿಬ್ಬಂದಿಗಳ ನಿಶ್ಚಯದಂತೆ ನಾನು ಅವರ ಉತ್ತಮ ನಡೆಗೆ ಸಹಕಾರ ನೀಡಿ ಅವರ ಜೊತೆಯಲ್ಲಿ ಹೆಜ್ಜೆ ಹಾಕಿದ್ದೇನೆ.
ಒಂದು ಹೊಸ ಅನುಭವ ಮತ್ತು ಮನಸ್ಸಿಗೆ ಖುಷಿಯನ್ನು ತಂದು ಕೊಟ್ಟಿದೆ ಎಂದು ಅವರು ಹೇಳಿದರು.
ತಾಲೂಕು ಕಚೇರಿ ಆಹಾರ ಶಿರಸ್ತೇದಾರ್ ಶ್ರೀನಿವಾಸ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಮಹಿಳಾ ಅಧಿಕಾರಿಗಳು ಸಹಿತ ಕಚೇರಿಯ ಸಿಬ್ಬಂದಿಗಳು, ಗ್ರಾಮಕರಣಿಕರು, ಗ್ರಾಮ ಸಹಾಯಕರು, ಸಿಬ್ಬಂದಿಗಳು ಭಾಗವಹಿಸಿ ಶ್ರೀ ಪೊಳಲಿ ಕ್ಷೇತ್ರದಲ್ಲಿ ಆರಾಧಿಸಲ್ಪಡುವ
ಶ್ರೀ ರಾಜರಾಜೇಶ್ವರಿ ಅಮ್ಮನವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಪುರೋಹಿತ ವರ್ಗ ವಿಶೇಷ ಪೂಜೆ ಸಲ್ಲಿಸಿ ತಾಲೂಕಿನ ತಹಶೀಲ್ದಾರ್ ಅವರ ಉತ್ತಮ ಕಾರ್ಯದಿಂದ ಬಂಟ್ವಾಳ ತಾಲ್ಲೂಕಿಗೆ ಸನ್ಮಮಂಗಳ ವಾಗುತ್ತದೆ ಎಂದು ಹೇಳಿ ಪ್ರಸಾದ ನೀಡಿದರು. ಸ್ವತ ತಾಲೂಕು ದಂಡಾಧಿಕಾರಿಯವರು ಕಾಲ್ನಡಿಗೆ ಜಾತ ಹಮ್ಮಿ ಕೊಂಡಿದ್ದರ ಬಗ್ಗೆ
ದೇವಸ್ಥಾನದ ಆಡಳಿತ ಅಧಿಕಾರಿಗಳು ಸಹಿತ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದರು.