ಕಣ್ಣಂಚಿನಲ್ಲಿ
ಜಿನುಗಿದ ಪನ್ನೀರಿಗಿಂತ
ಕೆನ್ನೆಯಿಂದ ಜಾರಿದ
ಕಣ್ಣೀರಿಗೇ ರಭಸ ಹೆಚ್ಚು!

ನಗುವಿನಲೆಯಲಿ
ತೇಲಿದ ನೌಕೆಗೆ
ನೋವಿನ ಕಡಲಾಳವೇ
ಅಚ್ಚುಮೆಚ್ಚು!

ಬೆರಗಿನರಮನೆಯ
ವಜ್ರ ವೈಢೂರ್ಯಗಳಿಗಿಂತ
ಬಡವನೆದೆಗೂಡಿನ
ಹಾಡಿನುಲಿಯೇ ರೋಚಕ!

ಧುಮ್ಮಿಕ್ಕುವಾಗ ನಲಿವ
ಮನದ ಜಲಪಾತಕಿಂತ
ನಿಧಾನವಾಗಿ ಹರಿವ
ಭಾವತೊರೆಯೇ ಮೋಹಕ!

✍ ನೀ.ಶ್ರೀಶೈಲ ಹುಲ್ಲೂರು
ಜಮಖಂಡಿ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here