ಉದುರುವೆಲೆಯ ನಭದ ಮೇಲೆ
ಉರಿವ ಬೆಂಕಿ ಜ್ವಾಲೆ
ಅಡರುತಿರುವ ಗಾಳಿ ನಡುವೆ
ತೊಡರುತಿವ ಸುರಿಮಳೆ
ಮನುಜನೊಲವ ಸೀಳಿ ತಾನು
ಮೆರೆಯುತಿರುವ ದ್ವೇಷವೆ
ಮಾಂಸ ತಿಂದು ರಕ್ತ ಕುಡಿದು
ತಣಿಯುತಿರುವ ರೋಷವೆ
ದೇಶ-ಕೋಶ ಭಾವ-ಭಾಷೆ
ಹರಿದು ಹಂಚಿ ತಿನ್ನುವೆ
ನಿನ್ನ ಹುಟ್ಟು ನಮ್ಮ ಸಾವು
ಅರಿತು ನಡೆ ಎನ್ನುವೆ
ನಮ್ಮ ನಡುವೆ ಕೊಳ್ಳಿ ಇಟ್ಟು
ಮೆರೆವುದೇನು ನ್ಯಾಯವೆ
ಬೇಗ ತೊಲಗು ಎಲ್ಲ ಸೇರಿ
ತುಳಿಯೆ ನೀನು ಸಾಯುವೆ
✍ ನೀ.ಶ್ರೀಶೈಲ ಹುಲ್ಲೂರು