ಬಂಟ್ವಾಳ: ಬಂಟ್ವಾಳ ತಾ. ಪುಂಜಾಲಕಟ್ಟೆಯಲ್ಲಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ, ಇರ್ವತ್ತೂರು-ಪಾಂಗಲ್ಪಾಡಿ ಶ್ರೀ ಲಕ್ಷೀ ಮಹಿಳಾ ಮಂಡಲದ ಸಹಕಾರದಲ್ಲಿ ಪಿಲಾತಬೆಟ್ಟು, ಮೂಡುಪಡುಕೋಡಿ, ಇರ್ವತ್ತೂರು ಗ್ರಾಮಸ್ಥರಿಗೆ ಮತ್ತು ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕಾರ್ಯಗಳೊಂದಿಗೆ ಕ್ರೀಡಾ ಕೂಟ ಆಯೋಜಿಸಿದ ಪಿಲಾತಬೆಟ್ಟು ಸಹಕಾರಿ ಸಂಘ ಅಭಿನಂದನೀಯ ಎಂದು ಹೇಳಿದರು.
ಸಂಘದ ಅಧ್ಯಕ್ಷ ಕೆ.ಲಕ್ಷೀನಾರಾಯಣ ಉಡುಪ ಅವರು ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಉದ್ಯಮಿ ಹರೀಂದ್ರ ಪೈ ನಯನಾಡು, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಇರ್ವತ್ತೂರು ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಕೇಂದ್ರ ಸಹಕಾರ ಬ್ಯಾಂಕ್ ಬಂಟ್ವಾಳ ವೃತ್ತ ವಲಯ ಮೇಲ್ವಿಚಾರಕ ಎಚ್.ಕೇಶವ ಕಿಣಿ, ವಿಟ್ಲ ವೃತ್ತ ಮೇಲ್ವಿಚಾರಕ ಯೋಗೀಶ್ ಗೌಡ, ಸ್ವಸಹಾಯ ಗುಂಪುಗಳ ಮೇಲ್ವಿಚಾರಕ ರಂಜಿತ್ ಕುಮಾರ್, ವಾಮದಪದವು ಸೇ.ಸ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಇರ್ವತ್ತೂರು-ಪಾಂಗಲ್ಪಾಡಿ ಶ್ರೀ ಲಕ್ಷೀ ಮಹಿಳಾ ಮಂಡಲದ ಅಧ್ಯಕ್ಷೆ ಶಶಿಕಲಾ ಉಡುಪ, ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಸುಂದರ ನಾಯ್ಕ್, ನಾರಾಯಣ ಪೂಜಾರಿ, ಬೂಬ ಸಪಲ್ಯ, ಸಂತೋಷ್ ಕುಮಾರ್ ಶೆಟ್ಟಿ, ದಿನೇಶ್ ಮೂಲ್ಯ, ಸೀತಾರಾಮ ಶೆಟ್ಟಿ, ಚಂದ್ರಶೇಖರ ಹೆಗ್ಡೆ, ಶಿವಯ್ಯ, ಸರೋಜಿನಿ ಡಿ.ಶೆಟ್ಟಿ, ಹರ್ಷಿಣಿ ಪುಷ್ಪಾನಂದ ಸಿಬಂದಿ ವರ್ಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಅಧ್ಯಕ್ಷ ಸಹಕಾರಿ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಂಘದ ಕಟ್ಟಡ ನಿರ್ಮಾಣ ಸಹಾಯಧನವಾಗಿ ಕೊಡಮಾಡಿದ 5 ಲ.ರೂ. ಗಳ ಚೆಕ್‌ನ್ನು ರಾಜಾರಾಂ ಭಟ್ ಅವರು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಕೆ.ಲಕ್ಷಿ ನಾರಾಯಣ ಉಡುಪ ಅವರು ಸ್ವಾಗತಿಸಿದರು. ಮು.ಕಾ. ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ವಂದಿಸಿದರು. ನಿರ್ದೇಶಕ ಪ್ರಭಾಕರ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here