ಬಂಟ್ವಾಳ: ಪೆರಾಜೆ ಶ್ರೀ ದೇವಿ ಭಜನಾ ಮಂದಿರದ ಮಂಡಳಿ ವತಿಯಿಂದ ಜರಗುವ ೩ನೇ ವರ್ಷದ ವಾರ್ಷಿಕ ಭಜನೆ ಮತ್ತು ದುರ್ಗಾ ಪೂಜೆ ಕೃಷ್ಣ ಕುಮಾರ್ ಭಟ್ ಅವರ ಪೌರೋಹಿತ್ಯ ದಲ್ಲಿ
ಜ.೧೨ ರಂದು ಆದಿತ್ಯವಾರ ಸಂಜೆ ಬೊಳ್ಳುಕಲ್ಲು ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ನಡೆಯಿತು.

ಬೆಳಗ್ಗೆ ೧೦ ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ ೧ ಗಂಟೆಯಿಂದ ೬ ಗಂಟೆವರೆಗೆ ವಿವಿಧ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.
ಭಜನಾ ಸೇವೆಯ ಉದ್ಘಾಟನೆ ಯನ್ನು ಕೃಷ್ಣಕಯಮಾರ್ ಭಟ್ ಪೆರಾಜೆ ಅವರು ನೆರವೇರಿಸಿದರು.
ಆ ಬಳಿಕ ದುರ್ಗಾ ಪೂಜೆ ಆರಂಭವಾಗಲಿದ್ದು, ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಶ್ರೀದೇವಿ ಟ್ರಸ್ಟ್ ನ ಸರ್ವಸದಸ್ಯರು ಹಾಗೂ ಭಜನಾ ಮಂದಿರ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here