ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ, ಹಿರಿಯ ಛಾಯಾಗ್ರಾಹಕ ಪಲ್ಲವಿ ಸ್ಟುಡಿಯೋ ಮಾಲಕ ದಿ. ಪದ್ಮನಾಭ ರಾವ್ ಅವರಿಗೆ ಬಂಟ್ವಾಳ ವಲಯದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಬಂಟ್ವಾಳ ವಲಯ ಹಾಗೂ ಸಾರ್ವಜನಿಕರಿಂದ ಶೃದ್ದಾಂಜಲಿ ಸಭೆ ಬಿಸಿರೋಡಿನಲ್ಲಿ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯ, ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್ ನುಡಿ ನಮನ ಸಲ್ಲಿಸಿ ಮಿತವಾಗಿ ಮೌನಿಯಾಗಿ, ಎಲ್ಲರೊಂದಿಗೂ ಹಸನ್ಮುಖಿಯಾಗಿ ಬೆರಯುವ ಇವರ ಗುಣ ಆದರ್ಶವಾಗಿತ್ತು ಎಂದರು.

ಹಿರಿಯ ಕಲಾವಿದ ಮಂಜು ವಿಟ್ಲ ಮಾತನಾಡಿ, ಹೆರುವವರು ಯಾರು ಗೊತ್ತಿಲ್ಲ, ಹೊರುವವರು ಯಾರು ಗೊತ್ತಿಲ್ಲ ಈ ಮಧ್ಯೆ ದೇವರು ನೀಡಿದ ಸುಂದರ ಜೀವನದಲ್ಲಿ ತಮ್ಮ ಮಾತು, ನಡವಳಿಕೆ, ಸಂಸ್ಕಾರದ ಮೂಲಕ ಎಲ್ಲರಿಗೂ ಮಾದರಿಯಾದವರು ಪದ್ದಣ್ಣ ಎಂದು ಅವರು ಹೇಳಿದರು.


ಪದ್ಮನಾಭ ರಾವ್ ಅವರ ಸಹೋದರ ಬಿ. ರಾಮಚಂದ್ರ ರಾವ್, ಪ್ರೋ. ತುಕರಾಮ್ ಪೂಜಾರಿ, ಪ್ರೋ. ಅನಂತಪದ್ಮನಾಭ ರಾವ್, ಕುಮಾರಸ್ವಾಮಿ, ಸರಪಾಡಿ ಆಶೋಕ್ ಶೆಟ್ಟಿ, ಹರೀಶ್ ಮಾಂಬಾಡಿ, ರತ್ನದೇವ್ ಪುಂಜಾಲಕಟ್ಟೆ, ರಾಜ ಬಂಟ್ವಾಳ, ದಯಾನಂದ, ಪದ್ಮನಾಭ ರಾವ್ ಅವರ ಪುತ್ರಿ ಪಲ್ಲವಿ ಮತ್ತಿತರರು ನುಡಿನಮನ ಸಲ್ಲಿಸಿದರು.
ಹೆಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here