ಬಂಟ್ವಾಳ: ದೇವರಿಗೆ ಭಕ್ತಿಯ ಹೂ ಹಾಕಿದರೆ ಸಾಕು , ತೂಕ ಮಾಡುವ ಅಗತ್ಯ ವಿಲ್ಲ .
ಭಕ್ತಿಯಿಂದ ಮಾಡಿದ ಸೇವೆಗೆ ಭಗವಂತನ ಶಕ್ತಿ ದೊರಕುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ! ವಿರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ನಾವೂರ ದ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭ ದ ಅಂತಿಮ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ದೇವರ ಆಲಯ ಅತೀ ದೊಡ್ಡ ಶಕ್ತಿ, ಚಲನದಲ್ಲಿರು ದೇವರು ಸ್ಥಿರವಾಗಿರುವ ದೇವರನ್ನು ಏಕಾಗ್ರತೆ ಯಲ್ಲಿ ದೇವರ ಸೇವೆ ಮಾಡಿದ ಭಕ್ತಿಗೆ ಶಕ್ತಿ ಸಿಗುತ್ತದೆ.ನಂಬಿಕೆಗೆ ಬಹಳ ಶಕ್ತಿ ಇದೆ ಎಂದು ಅವರು ಹೇಳಿದರುಮೂರು ದೇವರ ಸಾನಿಧ್ಯ ನಾವೂರದಲ್ಲಿರುವುದರಿಂದ ವಿಶೇಷ ಕ್ಷೇತ್ರವಾಗಿದೆಜ್ಞಾನ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ ಸಮಸ್ಯೆ ಗಳು ಹೆಚ್ಚಾಗುತ್ತಾ ಹೋಗುತ್ತದೆ.ಜೀವನದಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ಸಾಗಿಸಲು ಅವರು ತಿಳಿಸಿದರು.ಸರಕಾರ ಅನೇಕ ಅನುಕೂಲಗಳನ್ನು ಒದಗಿಸಿದೆ, ಅಂತಹ ಕಾರ್ಯಕ್ರಮ ಗಳ ಸದ್ವಿನಿಯೋಗ ಪಡಿಸಿಕೊಳ್ಳಲು ಅವರು ತಿಳಿಸಿದರು.
ಯೋಚನೆ ಮಾಡಿದ ವ್ಯಕ್ತಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಸ್ವಸಹಾಯ ಸಂಘ ಸ್ವಾವಲಂಬಿ ಬದುಕಿಗೆ ಪ್ರೇರಣೆ ಶಕ್ತಿ ನೀಡಿದೆ, ಭವಿಷ್ಯಕ್ಕೆ ರಕ್ಷಣೆ ನೀಡಿದೆ.ಭಕ್ತರು ಶ್ರೀಮಂತರಾದಾಗ ದೇವಾಲಯಗಳು ಶ್ರೀಮಂತ ವಾಗುತ್ತದೆ .ಧಾರ್ಮಿಕ, ಆಧ್ಯಾತ್ಮ ಜ್ಞಾನದ, ಲೌಕಿಕ, ಬೌದ್ದಿಕ ಬೆಳವಣಿಗೆಯ ಮೂಲಕ ಬದುಕು ಕಟ್ಟಿಕೊಳ್ಳಲು ಕ್ಷೇತ್ರ ಕೆಲಸ ಮಾಡುತ್ತಿದೆ.‌

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಧರ್ಮಕಾರ್ಯ ನಡೆಯುವ ಜಿಲ್ಲೆ ಅವಿಭಜಿತ ದ.ಕ.ಜಿಲ್ಲೆ ಎಂಬುದು ಹೆಮ್ಮೆಯ ವಿಚಾರ, ದೇವಸ್ಥಾನ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ಕೃಷಿ ಸಂಸ್ಕೃತಿ ಉಳಿಯಬೇಕಾಗಿದೆ, ಪೂರಕವಾಗಿ ಕೃಷಿಯ ಜೊತೆ ಹೋಗದಿದ್ದರೆ, ಧಾರ್ಮಿಕ ಕಾರ್ಯಗಳು ಮರೆಯಲು ಸಾಧ್ಯವಿದೆ ಎಂದರು.
ನಿತ್ಯವೂ ಧಾರ್ಮಿಕ ಕಾರ್ಯಕ್ರಮ ಗಳ ಮೂಲಕ ಸಂಭ್ರಮ ದಲ್ಲಿರು ವ ದೇವಸ್ಥಾನ ಗಳ ಮೂಲಕ ಕೋಟ್ಯಾಂತರ ರೂ ವ್ಯವಹಾರ ನಡೆಸುತ್ತದೆ ಎಂದರು.
ಮೂರು ತಲೆಮಾರಿನಿಂದ ನಡೆಯದ ಪುರಾಣದ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ದಲ್ಲಿ ಭಾಗಿಯಾದ ನಾವೆಲ್ಲರೂ ಭಾಗ್ಯವಂತರು ಎಂದು ಅವರು ಹೇಳಿದರು. ‌
ಧಾರ್ಮಿಕ ಕಾರ್ಯಕ್ರಮ ಗಳ ಮೂಲಕ ಧರ್ಮದ ಕೆಲಸಗಳಿಗೆ ಎಲ್ಲರ ಸಹಕಾರ ಅಗತ್ಯವಿದೆ.

ಮುಖ್ಯ ಅತಿಥಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ , ದೇವರು ಒಬ್ಬನೇ ನಾಮ ಹಲವು ಎಂಬ ನಂಬಿಕೆಯಲ್ಲಿ ಆರಾಧನೆ ಮಾಡಿದಾಗ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಅವರು ತಿಳಿಸಿದರು. ‌
ಜನಾಶ್ರಯದ ಮೂಲಕ ದೇವಸ್ಥಾನ ಗಳ ಪುನರುತ್ಥಾನಗಳು ನಡೆಯುತ್ತಿದೆ.ಆರ್ಥಿಕ ಸಂಕಷ್ಟ ದ ಕಾಲದಲ್ಲಿಯೂ ದೇವಾಲಯಗಳ ಜೀರ್ಣೋದ್ಧಾರ ಗಳು ನಡೆಯುತ್ತಿದೆ. ತುಳುವರು ತುಳುನಾಡಿನ ಮೂಲವಾಸಿಗಳು , ತುಳು ಭಾಷೆಯ ಪ್ರಭಾವ ದಲ್ಲಿ ತುಳುನಾಡಿನಲ್ಲಿ ಧಾರ್ಮಿಕ ಕಾರ್ಯಕ್ರಮ ಗಳು ನಡೆಯುತ್ತಿದೆ.
ಈ ಜಿಲ್ಲೆಯ ದೇವಸ್ಥಾನದ ಜೀರ್ಣೋದ್ಧಾರ ದ ಕೆಲಸಗಳಲ್ಲಿ ಹೆಗ್ಗಡೆಯವರ ಪಾತ್ರ ಬಹಳ ಹಿರಿದಾಗಿದೆ ಎಂದು ಅವರು ಹೇಳಿದರು.

ದೇವಸ್ಥಾನ ಗಳ ಜೀರ್ಣೋದ್ದಾರ ಕಾರ್ಯಗಳು ದೇವರ ಅಭೀಷ್ಟೆ ಪ್ರಕಾರ ನಡೆಯುತ್ತದೆ ಎಂದು ಸತ್ಯ ವಿಚಾರ ಎಂದು ಅವರು ಹೇಳಿದರು.
ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುವ ಲಕ್ಷದೀಪೋತ್ಸವ ಹಿಂದೂಗಳ ಸಮಾಜೋತ್ಸವ ಎಂದು ಅವರು ಹೇಳಿದರು.
ಕಾರ್ಯಕ್ರಮದ ಲ್ಲಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಉದ್ಯಮಿ ಕೆ.ಕೆ.ಶೆಟ್ಟಿ ಅಹಮದ್ ಬಾದ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮುರಳೀಧರ ಭಟ್, ರಘು ಸಪಲ್ಯ, ಹರಿಶ್ಚಂದ್ರ ಭಟ್, ವಸಂತ ಭಟ್ ನಾರವಿ, ಭಜರಂಗದಳದ ಪ್ರಮುಖ ಮುರಳೀಕೃಷ್ಣ ಹಸಂತಡ್ಕ, ಉದ್ಯಮಿ‌ಪ್ರಕಾಶ್ ಅಂಚನ್, ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮಾಭಿವೃದ್ದಿ ಯೋಜನೆ ಪದಾಧಿಕಾರಿಗಳು ಪೂಜ್ಯ ಡಾ! ವಿರೇಂದ್ರ ಹೆಗ್ಗಡೆಯವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು.
ನಾವೂರ ದೇವಸ್ಥಾನದ ಪೌರೋಹಿತ್ಯ ದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಚೇತನ ವೇದಮೂರ್ತಿ ವೆಂಕಟದಾಸ ಭಟ್ ಅವರಿಗೆ
ಕಾರ್ಯಕ್ರಮದ ಲ್ಲಿ ಗುರುವಂದನಾ ಕಾರ್ಯಕ್ರಮದ ಮೂಲಕ ಅಭಿನಂದನೆ ಸಲ್ಲಿಸಿದರು .

ಸಮಿತಿ ಯ ಕಾರ್ಯದರ್ಶಿ ಸದಾನಂದ ನಾವೂರ ಪ್ರಸ್ತಾವಿಕವಾಗಿ ಮಾತನಾಡಿದರು.‌
ಬ್ರಹ್ಮಕಲಶೋತ್ಸವ ಸಮಿತಿ‌ಗೌರವಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ದೇವಪ್ಪ ಪಂಜಿಕಲ್ಲು ವಂದಿಸಿದರು.
ಪ್ರವೀಣ್ ಕುಮಾರ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here