ಬಂಟ್ವಾಳ: ಭಕ್ತನ ನಿಷ್ಕಳಂಕ ಭಕ್ತಿಪೂರ್ವಕ ಸೇವೆ ಮಾತ್ರ ದೇವರಿಗೆ ಪ್ರೀತಿ. ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೂಲಕ ಪ್ರತಿಯೊಬ್ಬರ ಬ್ರಹ್ಮಕಲಶ ಅಗಿದೆ ಎಂದು ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು.
ಅವರು ಜ.11 ರಿಂದ ಜ.19 ರವೆರೆಗೆ ನಡೆಯಲಿರುವ ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ – ಜಾತ್ರಾಮಹೋತ್ಸವ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಆಧ್ಯಕ್ಷತೆ ವಹಸಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ನಡೆದ ಬಳಿಕವೂ ದೇವಸ್ಥಾನದ ಅಭಿವೃದ್ಧಿಗೆ ಒಗ್ಗಟ್ಟಾಗಿ ಕೆಲಸ ಮಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ನೀಡಿ, ಆ ಮೂಲಕ ಸಂಸ್ಕಾರದ ಜೀವನಕ್ಕೆ ಪ್ರೇರಣೆ ನೀಡಿ ಎಂದರು.‌

ಸಭಾ ಕಾರ್ಯಕ್ರಮವನ್ನು ಬಿಲ್ಲವ ಮುಖಂಡ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುರೇಶ್ ಪರ್ಕಳ ಧಾರ್ಮಿಕ ಉಪನ್ಯಾಸ ನೀಡಿ, ಮೇಲು ಕೀಳು ಭಾವನೆ ತೊಲಗಬೇಕಾಗಿದೆ ಮನುಷ್ಯನ ಹೃದಯದ ಬ್ರಹ್ಮಕಲಶ ಅಗಬೇಕು ಎಂಬ ನಿಟ್ಟಿನಲ್ಲಿ ದೇವಸ್ಥಾನಗಳ ಶುದ್ದಿ ಅಗುತ್ತಿದೆ. ಜಾತೀಯತೆ, ಅಸ್ಪೃಶ್ಯತೆ ನಿವಾರಣೆಗೆ ಮನಸ್ಸುಗಳನ್ನು ಒಟ್ಟು ಮಾಡಿ ಕೆಲಸ ಮಾಡಬೇಕು ಎಂದರು. ಬ್ರಹ್ಮಕಲಶೋತ್ಸವದ ಮೂಲಕ ಮನೆಮನೆಗಳಲ್ಲಿ ಸಂಸ್ಕಾರಗಳು ಮೂಡಿಬರಬೇಕು, ವಿಚಾರಗಳು ಆಚಾರಕ್ಕೆ ಬರಬೇಕು, ಸಾಮರಸ್ಯದ ಬದುಕಿಗೆ ನಾಂದಿ ಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ನಾಗೇಂದ್ರ ಬಾಳಿಗಾ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ಉದ್ಯಮಿ ರವೀಂದ್ರ ಟಿ.ಸಿ., ಸುಂದರ ಕುಲಾಲ್, ನಾವೂರ ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಚಂದಪ್ಪ ನಾಯ್ಕ, ಪುತ್ತೂರು ನಗರ ಸಭಾ ಸದಸ್ಯೆ ಗೌರಿ ಬನ್ನೂರು, ಶಶಿಕಲಾ ಪೈ ಬೀದಿ , ಬ್ರಹ್ಮಕಲಶೋತ್ಸವ ಕಾರ್ಯಧ್ಯಕ್ಷ ಮುರಳಿ ಭಟ್, ಹರಿಶ್ಚಂದ್ರ ಭಟ್ ಮಜಲು ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿದರು. ವಕೀಲ ಸುರೇಶ್ ನಾವೂರ ಪ್ರಸ್ತಾವಿಕವಾಗಿ ಮಾತನಾಡಿದರು. ವಿಜಯ ಹರಿಯಪ್ಪ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here