


ಬಂಟ್ವಾಳ: ಶಂಭೂರು-ಕೂಡಿಬೆಟ್ಟು ರಸ್ತೆ ಅಭಿವೃಧ್ಧಿಗೆ ಶಾಸಕರ ನಿಧಿಯಿಂದ ರೂ.15 ಲಕ್ಷ ಲೋಕಸಭಾ ಸದಸ್ಯರ ಅನುದಾನದಿಂದ 5 ಲಕ್ಷ ರೂಪಾಯಿ ಮಂಜುರಾತಿ ಕಾಮಾಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುದ್ದಲಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಕಮಾಲಾಕ್ಷಿ ಕೆ. ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪಂಚಾಯತ್ ಸದಸ್ಯರಾದ ದಿವಾಕರ ಶಂಭೂರು, ಉದಯರಾಜ್, ಹೇಮಾಲತಾ ಕೆ., ಜಯರಾಜ್, ಕಿಶೋರ್ ಶೆಟ್ಟಿ, ಕಿರಿಯ ಅಭಿಯಂತರ ಕುಶು ಕುಮಾರ್, ಸ್ಥಳೀಯ ಗಣ್ಯರಾದ ಶ್ರೀಪತಿ ಭಟ್ ಪಳನೀರು, ಪ್ರಭಾಕರ ಭಟ್ ಕೆ., ಬೋಜರಾಜ್ ಕೆ., ಪಂಚಾಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಟೈಲರ್, ಕಮಾಲಾಕ್ಷ ಶಂಭೂರು, ಮಾಧವ ಪಿ., ಪ್ರೇಮನಾಥ್ ಶೆಟ್ಟಿ ಅಂತರ, ಬೂತ್ ಸಮಿತಿ ಅಧ್ಯಕ್ಷರಾದ ಯೋಗೀಶ, ಸಂತೋಷ್, ಗುತ್ತಿಗೆದಾರರಾದ ನಾಗೇಶ್ ನಾಲ, ಸಂದೇಶ್ ಉಪಸ್ಥಿತರಿಧ್ದರು. ತಾ.ಪಂ. ಮಾಜಿ ಉಪಧ್ಯಾಕ್ಷ ಆನಂದ ಶಂಭೂರು ಸ್ವಾಗತಿಸಿದರು.


