ವಿಟ್ಲ: ವಿದ್ಯಾರ್ಜನೆ ಗಾಗಿ ಮಂಗಳೂರಿಗೆ ತೆರಳಿದ ಮಹಿಳೆಯೊರ್ವಳು ಕಾಣೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇಪು ಗ್ರಾಮದ ಬಡಕೋಡಿ ನಿವಾಸಿ
ಗಣೇಶ್ ಅವರ ಪತ್ನಿ ರಮೀತಾ ಅವರು ಕಾಣೆಯಾಗಿರುವ ಮಹಿಳೆ.
ಬಂಟ್ವಾಳ ತಾಲೂಕು ಕೇಪು ಗ್ರಾಮದ ಕೆ. ರವೀಂದ್ರ ಎಂಬವರ ಪುತ್ರಿಯನ್ನು ಗಣೇಶ್ ಅವರು 13.08.2019ರಂದು ಪ್ರೀತಿಸಿ ಮದುವೆಯಾಗಿತ್ತು.
ಜನವರಿ 07 2020 ರಂದು ಬೆಳಿಗ್ಗೆ 6.30 ಗಂಟೆಗೆ ಬೆಳಿಗ್ಗೆ ಗಂಡನ ಮನೆಯಿಂದ ಎಂದಿನಂತೆ ಪಾರಾಮೆಡಿಕಲ್ ವಿಧ್ಯಾಭ್ಯಾಸಕ್ಕೆ ಮಂಗಳೂರಿನ ಕೊಲೋಸೊ ಸಂಸ್ಥೆಗೆ ಹೋದವರು ಸಂಜೆಯಾದರೂ ಮನೆಗೆ ಬಾರದೇ ಇದ್ದ ಕಾರಣ ಆಕೆಯ ಮೊಬೈಲ್‌ಗೆ ಪೋನ್ ಮಾಡಿದಾಗ ಸ್ವಿಚ್‌ಆಪ್ ಆಗಿದೆ.
ಮನೆಯಿಂದ ವಿದ್ಯಾರ್ಜನೆ ಗೆ ತೆರಳಿದವಳು ಸಂಜೆಯಾದರು ಮನೆಗೆ ಬಾರದೆ ಇರುವ ಕಾರಣ
ಕಾಣೆಯಾದ ರಮಿತಳನ್ನು ಪತ್ತೆ ಮಾಡಿಕೊಡಬೇಕು ಎಂದು ವಿಟ್ಲ ಠಾಣೆಗೆ ಗಂಡ ದೂರು ನೀಡಿದ್ದಾರೆ.