ಬಂಟ್ವಾಳ: ವಿದ್ಯಾರ್ಥಿ ದೆಸೆಯಲ್ಲಿ ಓದು, ಬರಹದೊಂದಿಗೆ ಅಬ್ದುಲ್ ಕಲಾಂ ನಂತಹ ವ್ಯಕ್ತಿಗಳ ಆದರ್ಶ, ವಿಚಾರಧಾರೆಗಳನ್ನು ಮೈಗೂಡಿಕೊಳ್ಳುವಂತೆ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢ ಶಾಲೆಯ ಕನ್ನಡ ಪ್ರಾಧ್ಯಾಪಕ ಧನರಾಜ್ ದೊಡ್ಡ ನೇರಳೆ ಹೇಳಿದ್ದಾರೆ.
ಅವರು ಮೆಲ್ಕಾರ್ ಎಮಿನೆಂಟ್ ವಿದ್ಯಾ ಸಂಸ್ಥೆಯ ಮೂರನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಸಂಸ್ಥೆಯ ವ್ಯವಸ್ಥಾಪಕ, ಪ್ರಾಂಶುಪಾಲ ಮುಹಮ್ಮದ್ ಇರ್ಷಾದ್ ಶೈಕ್ಷಣಿಕ ವರದಿಯನ್ನು ವಾಚಿಸಿದರು.
ವೇದಿಕೆಯಲ್ಲಿ ಮೆಲ್ಕಾರ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಲತೀಫ್, ರೊನಾಲ್ಡೋ ಲಾರೆನ್ಸ್ ಡಿಸೋಜ, ಪುರಸಭಾ ಸದಸ್ಯ ಸಿದ್ದೀಕ್, ಹಾಜಿ ಎಂ.ಎಚ್.ಇಕ್ಬಾಲ್ ಹಾಜರಿದ್ದರು.
ಸಂಸ್ಥೆಯ ಶಿಕ್ಷಕಿಯರಾದ ಆಯಿಷಾ, ಅನ್ಸೀಫಾ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಂಸ್ಥೆಯ ಶಿಕ್ಷಕಿ ಶಬೀದಾ ಸ್ವಾಗತಿಸಿ, ಶಿಕ್ಷಕಿ ಫಾತಿಮತ್ ತಸ್ರೀಫಾ ವಂದಿಸಿದರು. ಶಿಕ್ಷಕಿ ಕೈರುನ್ನೀಸಾ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.