ಮಂಗಳೂರು: ಗೋಲಿಬಾರ್‌ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗಡಿಭಾಗದ ಕೇರಳದವರಿಗೆ ಮಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಯಾರಿಗೆ ನೋಟೀಸ್ ಜಾರಿಗೆಯಾಗಿದೆಯೋ ಅವರೆಲ್ಲರೂ ಇಂದು ತನಿಖೆಗೆ ಆಗಮಿಸಲು ಪೊಲೀಸ್ ಇಲಾಖೆ ತಿಳಿಸಲಾಗಿತ್ತು. ಇದರಂತೆ ಇಂದು ಬಂದರು ಠಾಣೆಗೆ ಕೇರಳದ ಜನರು ಬಂದು ತನಿಖೆಗೆ ಹಾಜಾರಾಗ್ತಾ ಇದ್ದಾರೆ. ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಕೇರಳದ ಹಲವು ಮಂದಿಗೆ ನೋಟಿಸ್ ಜಾರಿಮಾಡಲಾಗಿದ್ದು, ಗಲಭೆ ಸಂದರ್ಭ ಕೇರಳದ ಜನರಿದ್ದರು ಎಂಬ ಅನುಮಾನದಲ್ಲಿ ಹಾಗೂ ಕೇರಳದಲ್ಲಿ ಯಾರೆಲ್ಲ ಮಂಗಳೂರಲ್ಲಿ ಇದ್ರು ಎಂಬ ಆಧಾರದಲ್ಲಿ ಪೊಲೀಸ್ ಇಲಾಖೆ ನೋಟಿಸ್ ನೀಡಿತ್ತು. ಇಂದು ಒಬ್ಬೊಬ್ಬೊರಾಗಿಯೇ ಕೇರಳದ ಕಾಸರಗೋಡು, ಮಂಜೇಶ್ವರ ಮತ್ತು ಉಪ್ಪಳ ಸೇರಿದಂತೆ ಹಲವಾರು ಭಾಗದ ಜನ ತನಿಖೆಗಾಗಿ ಬಂದರು ಠಾಣೆಗೆ ಬರುತ್ತಿದ್ದಾರೆ. ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಹೆಚ್ಚಿನ ಎಲ್ಲಾ ಕೇರಳ ಜನತೆಗೆ ನೋಟೀಸ್ ನೀಡಲಾಗಿದ್ದು, ಅದರಂತೆ ಇಂದು ಮಹಿಳೆಯರು ಸೇರಿದಂತೆ ಹಲವಾರು ಜನರು ಹಾಜಾರಾಗ್ತಾ ಇದ್ದಾರೆ. ತನಿಖಾ ಸಂದರ್ಭದಲ್ಲಿ ವಿವರಣೆ ಅಥವಾ ಸಮಜಾಯಿಷಿ ನೀಡುವ ವೇಳೆ ಅನುಮಾನ ಬಂದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here