ಮಂಗಳೂರು: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಹಳೆಯಂಗಡಿ ಆಟೋ ರಿಕ್ಷಾ ಚಾಲಕ ಸಂಪತ್ ಕರ್ಕಡ (50) ಅವರ ಮೃತದೇಹ ಹೆಜಮಾಡಿ ಟೋಲ್ ಗೆಟ್ ಬಳಿ ಅವರಾಳು,ಮಟ್ಟು ಎಂಬಲ್ಲಿನ ಶಾಂಭವಿ ನದಿಯ ನಿರ್ಮಾಣ ಹಂತದ ಸೇತುವೆಯ ಬಳಿ ಪತ್ತೆಯಾಗಿದೆ ಘಟನೆ ಬೆಳಕಿಗೆ ಬಂದಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪಡುಬಿದ್ರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.