ಬಂಟ್ವಾಳ : ಮಂಚಿ ಕುಕ್ಕಾಜೆಯಲ್ಲಿರುವ ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ 13 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಡಾ. ರಾಜೇಂದ್ರಕುಮಾರ್ ಬಳಗ 9 ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಸಹಕಾರ ಬಳಗದ ಬಿ. ಉಮ್ಮರ್ , ಚಂದ್ರಹಾಸ ಕರ್ಕೇರ , ವಿಶ್ವನಾಥ ನಾಯಕ್, ಫಿಲೋಮಿನಾ ಡಿಸೋಜಾ , ದಿವಾಕರ ನಾಯಕ್, ಸುಧಾಕರ್ , ಅಬ್ದುಲ್ ರಹಿಮಾನ್ , ಭಾಗೀರಥಿ, ಸಂಧ್ಯಾ ಕುಮಾರಿ ಆಯ್ಕೆಯಾದವರು ಎಂದು ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಉಮ್ಮರ್ ತಿಳಿಸಿದ್ದಾರೆ. ಸಂಘದ ಒಟ್ಟು 13 ಸ್ಥಾನಗಳ ಪೈಕಿ 9 ಮಂದಿ ಸಹಕಾರ ಬಳಗದ ಅಭ್ಯರ್ಥಿಗಳು ಆಯ್ಕೆಯಾದರೆ ನಾಲ್ಕು ಮಂದಿ ಸಹಕಾರ ಭಾರತಿ ಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.