ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘದ ನೂತನ ಸಭಾಭವನ ನಿರ್ಮಾಣದ ಸಹಾಯಾರ್ಥವಾಗಿ ಸ್ವಜಾತಿ ಭಾಂದವರಿಗೆ ಕುಂಬಾರ ಟ್ರೋಫಿ- 2020 ಕ್ರಿಕೆಟ್ ಪಂದ್ಯಾಟ ಬಂಟ್ವಾಳ ಎಸ್.ವಿ.ಎಸ್. ಪ್ರೌಢ ಶಾಲಾ ಮೈದಾನದಲ್ಲಿ ನಡೆಯಿತು.
ಮಂಗಳೂರು ಭಾರತೀಯ ವೈಧ್ಯಕೀಯ ಸಂಘದ ಅಧ್ಯಕ್ಷ, ಮಂಗಳುರು ಶ್ರೀನಿವಾಸ್ ಯುನಿವರ್ಸಿಟಿಯ ಚೀಫ್ ಮೆಡಿಕಲ್ ಆಫಿಸರ್‍ ಹಾಗೂ ಪ್ರೊಫೆಸರ್‍ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು,  ಕ್ರೀಡೆ ಆರೋಗ್ಯ ದೃಷ್ಟಿಯಿಂದ ಸಹಕಾರಿಯಾಗುತ್ತದೆ, ಜೊತೆಗೆ ಸಂಘಟನೆಯ ಉದ್ದೇಶದಿಂದಲೂ ಅಷ್ಟೇ ಪ್ರಬಲವಾದ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು. ಸಮುದಾಯದ ಬಾಂಧವರನ್ನು ಕ್ರೀಡೆಯ ಮೂಲಕ ಒಗ್ಗೂಡಿಸಿ ಶಕ್ತಿ ಪ್ರದರ್ಶನದ ಜೊತೆಯಲ್ಲಿ ವ್ಯಕ್ತಿ ನಿರ್ಮಾಣದ ಕಾರ್ಯ ಸಮುದಾಯಕ್ಕೆ ಮಾದರಿಯಾಗಿದೆ ಎಂದರು. ಸಂಘಟನೆಯ ಮೂಲಕ ಪ್ರಬಲರಾಗಿ, ಶಿಕ್ಷಣಕ್ಕೆ ಉತ್ತೇಜನ ನೀಡಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿ ಕುಲಾಲ ಸೇವಾ ಸಂಘದ ಅಧ್ಯಕ್ಷ ಭೋಜನಾರಾಯಣ ಮೂಲ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಕರಾವಳಿ ಕುಲಾಲ/ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ತೇಜಸ್ವಿರಾಜ್, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕಾರ್ಯಾಧ್ಯಕ್ಷರು ಕುಲಾಲೆರ್‍ ಕುಡ್ಲದ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಮಂಗಳೂರು ಬರ್ಕೆ ಫ್ರೆಂಡ್ಸ್ ನ ಸ್ಥಾಪನಾಧ್ಯಕ್ಷ ಯಜ್ಞೇಶ್ ಕುಲಾಲ್, ಮಾಣಿ ವಿನಾಯಕ ಬೋರ್‍ ವೆಲ್ ಮತ್ತು ಅರ್ಥ ಮೂವರ್‍ಸ್ ನ ಮಾಲಕ ಜಯರಾಮ ಕುಲಾಲ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ/ಕುಂಬಾರರ ಯುವ ವೇದಿಕೆಯ ಅದ್ಯಕ್ಷ ರೋ. ಸುಕುಮಾರ್‍ ಬಂಟ್ವಾಳ, ಸೂರಿಕುಮೇರು ಶ್ರೀ ದುರ್ಗಾ ಕನ್ ಸ್ಟ್ರಕ್ಷನ್ ಶಂಭುಗ ಉದ್ಯಮಿ ಗೋಪಾಲ ಮೂಲ್ಯ ಎಸ್. ಶಂಭುಗ, ಬೆಂಗಳೂರು ಅರ್‍.ಎಸ್. ಡೆವೆಲಪರ್‍ಸ್ ಮಾಲಕ ಎನ್.ಪಿ.ರಾಜಶೇಖರ್‍, ನಿವೃತ್ತ ಅಧ್ಯಾಪಕ ರಾಮಚಂದ್ರ ಮೂಲ್ಯ ಗಣೇಶನಗರ, ಕೆದಿಲ ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಕುಲಾಲ್ ಪೇರಮೊಗರು, ನಿವೃತ್ತ ಸೈನಿಕ ಜನಾರ್ದನ ಕುಲಾಲ್, ಪಿ.ಡಬ್ಲೂಡಿ ಕಂಟ್ರಾಕ್ಟರ್‍ ಶಿವಪ್ರಸಾದ್ ಕುಲಾಲ್ ಪೆರಾಜೆ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಓಂ ಸಾಯಿ ಎಂಟರ್‍ ಪ್ರೈಸಸ್ ನ ಹರಿಯಪ್ಪ ಬಿ.ಮೂಲ್ಯ, ಪೆರ್ನೆ ಹರ್ಷ ಸ್ಟುಡಿಯೋ ಮತ್ತು ವೀಡಿಯೊದ ಹರೀಶ್ ಕುಲಾಲ್ ಮಾಣಿ, ಮಂಗಳೂರು ಸಿವಿಲ್ ಇಂಜಿನಿಯರ್‍ ಬಾಲಾಕೃಷ್ನ ಕುಲಾಲ್ ಪೆರಾಜೆ, ಮಾಣಿ ಮಹಾಗಣೇಶ್ ಮಾಲಕ ಮಾಧವ ಕುಲಾಲ್, ಮಾಣಿ ಸಿವಿಲ್ ಕಂಟ್ರಾಕ್ಟರ್‍ ರಾಜೇಶ್ ಕೊಪ್ಪಲ, ಸಾಯಿ ಅಲ್ಯೂಮಿನಿಯಂ ಶಂಭುಗದ ಮಾಲಕ ನರೇಂದ್ರ ಮೂಲ್ಯ, ಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಾಗೇಶ್ ಮಾಣಿ, ಮಾಣಿ ಕುಲಾಲ ಸಂಘದ ಪಿ.ಪದ್ಮನಾಭ ಕುಲಾಲ್, ಮಾಣಿ ನವದುರ್ಗ ಕೆಟರರ್‍ಸ್ ನ ರಾಜೀವಿ ಚೆನ್ನಪ್ಪ ಕುಲಾಲ್, ಉಪ್ಪಿನಂಗಡಿ ಕಮಲಾಶ್ರೀ ಟಿಂಬರ್‍ಸ್ ನ ಸುಶೀಲಾ ಆನಂದ ಕುಲಾಲ್, ಮಾಣಿ ಕುಲಾಲ ಮಹಿಳಾ ಸಂಘದ ಕಾರ್ಯದರ್ಶಿ ಸೌಭಾಗ್ಯ ನಾರಾಯಣ ಕುಲಾಲ್ ಸೂರಿಕುಮೇರು, ಸಂಘದ ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಶಂಭುಗ, ಹರೀಶ್ ಕರಿಮಜಲು, ಕೋಶಾಧಿಕಾರಿ ಸದಾಶಿವ ಕುಲಾಲ್ ಮಾಣಿ, ಉಪಸ್ಥಿರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯದರ್ಶಿ ಪದ್ಮನಾಭ ಕುಲಾಲ್ ಕೊಮ್ಮಕೋಡಿ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here