ಬಂಟ್ವಾಳ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನಲ್ಲೊಂದಾದ ಬಂಟ್ವಾಳ ತಾಲೂಕು  ಪ್ರಾಥಮಿಕ ಸಹಕಾರಿ ಕೃಷಿ ಮತ್ತು  ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತದ ( ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್)  ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಜ.25 ರಂದು ಶನಿವಾರ ಚುನಾವಣೆ ನಡೆಯಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರ ಮಧ್ಯೆ ನೇರಾನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.   ಈ ಬ್ಯಾಂಕಿನ ಆಡಳಿತ ಮಂಡಳಿಗೆ  ಹಿಂದೆಯು ಸಾಕಷ್ಟು ಬಾರಿ ಚುನಾವಣೆ ನಡೆದಿತ್ತಾದರೂ,ಈ ಬಾರಿಯ ಚುನಾವಣೆ ಮಾತ್ರ ಕೊಂಚ ಕುತೂಹಲ ಮೂಡಿಸಿದೆ.  ಬ್ಯಾಂಕಿನ ಆಡಳಿತ ಮಂಡಳಿಯ  13 ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು,  ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದ ಒಂದು ಸ್ಥಾನಕ್ಕೆ ಕಾರಣಾಂತರದಿಂದ ಚುನಾವಣೆ ನಡೆಯುತ್ತಿಲ್ಲ.  ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಜ.೨೫ ರಂದು ಬೆಳಿಗ್ಗೆ ೯ ರಿಂದ ೪ ರವರೆಗೆ ಮತದಾನ ನಡೆಯಲಿದ್ದು,ಬಳಿಕ ಮತ ಎಣಿಕೆನಡೆಯುವುದು.

ಈ ಬ್ಯಾಂಕಿನಲ್ಲಿ ಸಾವಿರಕ್ಕು ಅಧಿಕ ರೈತ ಮತದಾರನ್ನು ಹೊಂದಿದ್ದು ,  ಈ ಬಾರಿಯ ಚುನಾವಣೆಯಲ್ಲಿ  ಕಾನೂನು ತಿದ್ದುಪಡಿಯಿಂದಾಗಿ  ವಾರ್ಷಿಕ 5 ಮಹಾಸಭೆಗಳಲ್ಲಿ 3 ಮಹಾಸಭೆಗಳಲ್ಲಿ ನಿರಂತರವಾಗಿ ಭಾಗವಹಿಸದ ಹಾಗೂ ಕನಿಷ್ಠ ವ್ಯವಹಾರ ಮಾಡದ ಸದಸ್ಯರಿಗೆ ಮತದಾನದ ಹಕ್ಕು ಇಲ್ಲದಿರುವುದರಿಂದ ಮತದಾರರ  ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿದೆಯಾದರೂ ,ಕೆಲ ಕ್ಷೇತ್ರಗಳಲ್ಲಿ ಈ ತಿದ್ದುಪಡಿಯನ್ನು  ನ್ಯಾಯಾಲಯದಲ್ಲಿ ಪ್ರಶ್ನಿಸಿದ ಹಿನ್ನಲೆಯಲ್ಲಿ ಕೋಟ್೯ ಆದೇಶದಂತೆ ಹಲವು ಮತದಾರರಿಂಗೆ ಮತದಾನದ ಅವಕಾಶ ಸಿಕ್ಕಿರುವುದರಿಂದ ಕೆಲ ಅಭ್ಯರ್ಥಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಹಲವರಿಗೆ ರಾಜಕೀಯ ಬಿಲ್ಡಪ್;  ಪ್ರಮುಖವಾಗಿ ಮಾಜಿ ಸಚಿವ ರಮಾನಾಥ ರೈ  ಇದೇ ಬ್ಯಾಂಕಿನ ಮೂಲಕ ರಾಜಕೀಯ ಪ್ರವೇಶಿಸಿ ಶಾಸಕ,ಸಚಿವ ಸ್ಥಾನದಂತ ಹುದ್ದೆಗೇರಿರುವುದು ತಾಜಾ ಉದಾಹರಣೆ.ಇವರು ಮಾತ್ರವಲ್ಲ ಈ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲುಸಿದ ಹಲವು ಮಂದಿಗೆ ರಾಜಕೀಯ ಕ್ಷೇತ್ರದಲ್ಲಿ ಬಿಲ್ಡಪ್ ಆಗಿದ್ದಾರೆ. ಬಂಟ್ವಾಳ ಭೂ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಗುರುತಿಸಿದವರೇ ಅಭ್ಯರ್ಥಿಗಳಾಗಿ ಕಣದಲ್ಲಿರುವುದರಿಂದ ಉಭಯಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಯೇ ತೆಗೆದುಕೊಂಡಿದೆ.  ಬ್ಯಾಂಕಿನ  ಆಡಳಿತ ಮಂಡಳಿಯ ಇಷ್ಟು ಸಮಯದ ವೈಫಲ್ಯ,ಕೇಂದ್ರ,ರಾಜ್ಯದಲ್ಲಿ ಆಡಳಿತದಲ್ಲಿರುವ ಸರಕಾರ ರೈತರಿಗೆ ಮಾಡಿರುವ ಅನುಕೂಲ ಜೊತೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಮಾಡಿರುವ ಸಾಧನೆಯನ್ನು ಮುಂದಿಟ್ಟು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದರೆ,ಬ್ಯಾಂಕಿನ ಅಭಿವೃಧ್ಧಿಗೆ ಮಾಡಿರುವ ಸಾಧನೆ,ಮಾಜಿ ಸಚಿವ ರಮಾನಾಥ ರೈ ಅವರ ವರ್ಚಸ್ಸು ಮತ್ತು   ತಮ್ಮ ಬೆಂಬಲಿತ ರೈತ ಸದಸ್ಯರನ್ನೇ ಹೆಚ್ಚು ಹೊಂದಿರುವುದರಿಂದ ಈ ಸದಸ್ಯರು ‘ ಕೈ’ ಬಿಡರೆಂಬ ನಂಬಿಕೆಯೊಂದಿಗೆ ಹಾಲಿ ಅಧ್ಯಕ್ಷ ಸುದರ್ಶನ್ ಜೈನ್ ನೇತೃತ್ವದ  ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತಯಾಚನೆಯಲ್ಲಿ ನಿರತರಾಗಿದ್ದಾರೆ.      ಹಾಲಿ ಮತ್ತು ಹೊಸ ಮುಖ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ಹಾಲಿ ಸದಸ್ಯರಾಗಿದ್ದಾರೆ.ಇದರಲ್ಲಿ ಅಧ್ಯಕ್ಷ ಸುದರ್ಶನ್ ಜೈನ್,ಉಪಾಧ್ಯಕ್ಷ ಸಂಜೀವಪೂಜಾರಿ,ನಿರ್ದೇಶಕರಾದ ಚಂದ್ರಪ್ರಕಾಶ್ ಶೆಟ್ಟಿ,ಚಂದ್ರಹಾಸ ಕರ್ಕೇರ,ಮುರಳೀಧರ ಶೆಟ್ಟಿ,ಶಿವಪ್ಪ ಪೂಜಾರಿ,ಪರಮೇಶ್ವರ ಎಂ.ಹೊನ್ನಪ್ಪ ನಾಯ್ಕ,ಸುಜಾತ ರೈ,ರಾಜೇಶ್ ಕುಮಾರ್ ಹೀಗೆ ಎಲ್ಲರೂ ಹಾಲಿಗಳೇ ,ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಬಹುತೇಕ ಹೊಸಮುಖಗಳಾಗಿದೆ.ಈ ಪೈಕಿ ಪ್ರಮುಖವಾಗಿ ಬಿ.ಸಿ.ರೋಡಿನ ಯುವ ನ್ಯಾಯವಾದಿ,ಚತುರ ಸಂಘಟಕ,ವಾಗ್ಮಿಯು ಆದ ಅರುಣ್ ರೋಶನ್ ಡಿಸೋಜ ಅವರು ಬಿ.ಮೂಡ ಕ್ಷೇತ್ರದಲ್ಲಿ ಜಿಪಂಸದಸ್ಯ ಚಂದ್ರಪ್ರಕಾಶ್ ಶೆಟ್ಟಿಯವರ ಎದುರು ಕಣದಲ್ಲಿದ್ದಾರೆ,ಅದರಿಂದಾಗಿ ಈ ಕ್ಷೇತ್ರದತ್ತ ಎಲ್ಲರ ಕಣ್ಣು ನೆಟ್ಟಿದೆ.ಉಳಿದಂತೆ ಕ್ರಮವಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ  ಲಿಂಗಪ್ಪ ಪೂಜಾರಿ, ಗಂಗಾಧರ,ಲೋಲಾಕ್ಷಿ,ವಿಜಯಾನಂದ,ಲತಾ,ಸುಂದರಪೂಜಾರಿ,ವಿಮಲ,ಚಂದ್ರಶೇಖರ ಬಂಗೇರ,ಐತಪ್ಪ,ರಾಮನಾಯ್ಕ. ಕೆ,ಷುರುಷೋತ್ತಮ.ಬಿ ಅವರು ಸ್ಪರ್ಧೆಯಲ್ಲಿದ್ದಾರೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸುಡುಬಿಸಿಲಿನಲ್ಲು ಅಭ್ಯರ್ಥಿಗಳು ರೈತ ಸದಸ್ಯ ಮತದಾರನ ಮನೆಗೆ ಭೇಟಿ ನೀಡಿ ಮನವೊಲಿಸುವಲ್ಲಿ ನಿರತರಾಗಿದ್ದು,ರೈತ ಸದಸ್ಯರು ಯಾರಿಗೆ ಒಲಿಯುತ್ತಾರೆ ಎಂಬುದು ಶನಿವಾರ(ಜ.೨೫)ಸಂಜೆಯ ವೇಳೆಗೆ ಗೊತ್ತಾಗಲಿದೆ

ಬ್ಯಾಂಕಿನ ಆಡಳಿತಮಂಡಳಿಗೆ ಈ ಹಿಂದೆಯು    ಚುನಾವಣೆ ನಡೆದಿದೆಯಾದರೂ ಪೈಪೋಟಿಯ ಚುನಾವಣೆ ಇದೇ ಮೊದಲಿಗೆ ನಡದಂತಿದೆ.ಇದುವರೆಗೆ ಮತಯಾಚಿಸಲು ಸದಸ್ಯರ ಮನೆಬಾಗಿಲಿಗೆ ಬಾರದ ನಿರ್ದೇಶಕರು ,ಈ ಬಾರಿ ಮನೆ ಬಾಗಿಲಿಗೆ ಬಂದು ಮತಯಾಚಿಸುವಂತ ಸ್ಥಿತಿಗೆ ತಲುಪಿರುವುದು ವಿಶೇಷ ಎಂದು ಹಿರಿಯ ರೈತ ಸದಸ್ಯ ಮತದಾರರೋರ್ವರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here