ಬಂಟ್ವಾಳ: ತಾಜುಲ್ ಉಲಮಾ ಸುನ್ನಿ ಸೆಂಟರ್ ಕುಕ್ಕಾಜೆ ಕಾಪಿಕಾಡು ಇದರ ಆಶ್ರಯದಲ್ಲಿ ಬದ್ರ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ಅಸಯ್ಯದ್ ಮುಸ್ತಕುರೆಹಮಾನ್ ತಂಙಳ್ ಚಟ್ಟೆಕಲ್ ಅವರ ನೇತೃತ್ವದಲ್ಲಿ ನಡೆಯಿತು. ಟಿ.ಕೆ. ಸಹದಿ ಮಂಚಿ ಕಯ್ಯೂರು, ಎಸ್ ಎಮ್ ಆರಿಫ್ ಮದನಿ ಚಟ್ಟೆಕಲ್ ಮಹಮೂದ್ ಸಹದಿ ಕುಕ್ಕಾಜೆ, ಸಿದ್ದೀಕ್ ಫಾಲಿಲಿ ಕುಕ್ಕಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಅಬ್ಬಾಸ್ ಹಾಜಿ ಕುಕ್ಕಾಜೆ, ಇಸ್ಮಾಯಿಲ್ ದರ್ಭೆ, ಅಬೂಬಕ್ಕರ್ ತೋಟ, ಉಮ್ಮರ್ ಮುಸ್ಲಿಯಾರ್ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.