ವಿಟ್ಲ: ಸೇತುವೆಯ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಶಾಸಕರ ಪ್ರಯತ್ನದಿಂದ ಮಂಜೂರಾಗಿದೆ. ಗುತ್ತಿಗೆದಾರರ ಜತೆಗೆ ಪ್ರತಿಯೊಬ್ಬರು ಸಹಕಾರ ನೀಡುವ ಕಾರ್ಯವಾದಾಗ ಕಾಮಗಾರಿ ಉತ್ತಮವಾಗುತ್ತದೆ. ಗ್ರಾಮದ ಅಭಿವೃದ್ಧಿಯ ದೃಷ್ಟಿಕೋನ ಪ್ರತಿಯೊಬ್ಬ ಗ್ರಾಮಸ್ಥರಲ್ಲಿ ಇದ್ದಾಗ ಗ್ರಾಮ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು ಹೇಳಿದರು.
ಅವರು ಮಂಗಳವಾರ 50 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾಗುವ ನೀರ್ಕಜೆ ಸಮೀಪ ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆಯ ಕಿರು ಸೇತುವೆಯ ಕಾಮಗಾರಿಗೆ ಶಿಲಾನ್ಯಾಸ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ಸದಸ್ಯರಾದ ಹರೀಶ್ ನಾಯ್ಕ ನೀರ್ಕಜೆ, ರೇಖಾ, ಗ್ರಾಮ ಬಿಜೆಪಿ ಅಧ್ಯಕ್ಷ ಪುರುಷೋತ್ತಮ ಕಲ್ಲಂಗಳ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹರಿಪ್ರಸಾದ್ ಯಾದವ್, ಕೇಪು ಗ್ರಾಮ ಮಾಜಿ ಅಧ್ಯಕ್ಷ ಬಾಲಚಂದ್ರ ಕಟ್ಟೆ, ಸ್ಥಳೀಯರಾದ ವಿಜಯ ಸಾಲ್ಯಾನ್, ಐತ್ತಪ್ಪ, ನವೀನ್ ಕುಮಾರ್, ಸುನಿಲ್, ಶಶಿಧರ ನಾಯಕ್, ಜಾಗದ ಮಾಲಕರಾದ ಕಮಲಾಕ್ಷಿ, ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಷಣ್ಮುಂಗಮ್, ಸಹಾಯಕ ಇಂಜಿನಿಯರ್ ಪ್ರೀತಮ್, ಗುತ್ತಿಗೆದಾರ ಇರ್ಷಾದ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here