ಕೆಲಿಂಜ: ಕೆಲಿಂಜ ಕೇಸರಿ ಫ್ರೆಂಡ್ಸ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಅಸೋಸಿಯೇಶನ್ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಜ.11 (ನಾಳೆ) ಸಂಜೆ 4 ಗಂಟೆಗೆ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷರಾಗಿ ವಿಟ್ಲ ಹಿಂದು ಪರಿಷತ್ ಭಜರಂಗದಳ ವಿಟ್ಲ ಪ್ರಚಂಡದ ಕಾರ್ಯಧ್ಯಕ್ಷ ಪದ್ಮನಭ ಕಟ್ಟೆ ವಿಟ್ಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.